ವಿಜೃಂಭಣೆಯಿಂದ ನಡೆದ ಕುರುಬನಕಟ್ಟೆ ಕಂಡಾಯ ಉತ್ಸವ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.31-ತಾಲೂಕಿನ ಹರದನಹಳ್ಳಿ ನಾಯಕ ಜನಾಂಗದ ವತಿಯಿಂದ ಹಮ್ಮಿಕೊಂಡಿದ್ದ ಕುರುಬನಕಟ್ಟೆ ಕಂಡಾಯ ಉತ್ಸವದ ಮೆರವಣಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಗ್ರಾಮದಲ್ಲಿ ಶುಕ್ರವಾರ ನಡೆಯಿತು,
3ನೇ ವರ್ಷದ ಮಂಟೇಸ್ವಾಮಿ ಮಹಾದ್ವಾರ ವಾರ್ಷಿಕೋತ್ಸವ ಹಾಗೂ ಕುರುಬನಕಟ್ಟೆ ಕಂಡಾಯ ಉತ್ಸವ ಮೆರವಣಿಗೆ ಅಂಗವಾಗಿ ಗ್ರಾಮದ ಯಡಿಯೂರು ಸಿದ್ಧಲಿಂಗೇಶ್ವರ ಜನ್ಮಸ್ಥಳ ಎಂದೆ ಪ್ರಸಿದ್ಧವಾಗಿರುವ ಕಲ್ಯಾಣಿ ಕೊಳದ ಬಳಿ ಕಂಡಾಯಕ್ಕೆ ಹೂವಿನ ಅಲಂಕಾರ ಶೃಂಗರಿಸಿ, ವಿಶೇಷ ಪೂಜೆ ಸಲ್ಲಿಸಿ, ಸತ್ತಿಗೆ, ಸೂರೆ ಪಾನಿಕೆ, ನಾದಸ್ವರ, ತಮಟೆ, ಇನ್ನಿತರ ಕಲಾ ತಂಡಗಳೊಂದಿಗೆ ಅಲ್ಲಿಂದ ಹೊರಟ ಮೆರವಣಿಗೆ ರಥದ ಬಿದಿ ಮಾರಮ್ಮನ ದೇವಸ್ಥಾನ, ಅಮಚವಾಡಿ ರಸ್ತೆ ಮೂಲಕ ಕುಂಟಮ್ಮತಾಯಿ ದೇವಸ್ಥಾನಕ್ಕೆ ಉತ್ಸವ ತಲುಪಿತು,
ಗ್ರಾಮದ ಪ್ರಮುಖ ಬಿದಿಗಳಲಿ ಹಸಿರು ತೊರಣಗಳಿಂದ ಶೃಂಗರಿಸಿ, ಮಹಿಳೆಯರು ರಂಗೋಲಿಯನ್ನು ಬಿಡಿಸಿ, ಕುಂಟಮ್ಮತಾಯಿ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಿ, ಪೂಜೆಪುರಸ್ಕಾರ ನೇರವೆರಿಸಿ, ಭಕ್ತರು ಭಕ್ತಿಬಾವ ಮೆರದರು,
ಈ ಸಂದರ್ಭದಲ್ಲಿ ಕುರುಬನಕಟ್ಟೆ ಅರ್ಚಕರು. ನಾಯಕ ಜನಾಂಗದ ಯಜಮಾನರು, ಮಂಟೇಸ್ವಾಮಿ ದೇವರಗುಡ್ಡ ಭಕ್ತರು, ಗ್ರಾಮಸ್ಥರು ಇತರರು ಇದ್ದರು,