ಕಾರ್ಕಳ ಅತ್ಯಾಚಾರ ಪ್ರಕರಣ: ಡ್ರಗ್ಸ್ ಜಾಲ ಭೇದಿಸುತ್ತಿರುವ ಪೊಲೀಸರು!
ಕಾರ್ಕಳ ನಗರ ಪೊಲೀಸ್ ಠಾಣೆಯ ಮಾದಕ ದ್ರವ್ಯ ಪ್ರಕರಣದಲ್ಲಿ, ಮಾದಕ ದ್ರವ್ಯ ಪಡೆದಿರುವ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಲಾಗಿದ್ದು, ಆರೋಪಿ ಗಿರಿರಾಜು ಜಗಾಧಾಬಿ(೩೧), ಆಂಧ್ರಪ್ರದೇಶ ಹಾಗೂ ಜಾನ್ ನೊರೋನ್ಹಾ(೩೦), ಶಂಕರಪುರ ಇವರುಗಳು ಈ ಮೊದಲು ಕುವೈಟ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು, ಗಿರಿರಾಜು ಇವನು ಜಾನ್ ನೊರೋನ್ಹಾನಿಗೆ ಕರೆ ಮಾಡಿ ಡ್ರಗ್ಸ್ ಸಿಗುವ ಬಗ್ಗೆ ಕೇಳಿದ್ದು, ಜಾನ್ ನೊರೋನ್ನಾ ಗಿರಿರಾಜುನ್ನನು ಉಡುಪಿಗೆ ಬರಲು ತಿಳಿಸಿದ್ದು, ಅದರಂತೆ ಗಿರಿರಾಜು ಉಡುಪಿಗೆ ಬಂದಿರುತ್ತಾನೆ.
ಡಗ್ಸ್ ಬಗ್ಗೆ ಜಾನ್ ನೊರೊನ್ನಾ ಶಾಹಿದ್(೩೯), ಕಾರ್ಕಳ ಈತನನ್ನು ಪರಿಚಯಿಸಿರುತ್ತಾನೆ. ಶಾಹಿದ್ ಸ್ಥಳೀಯವಾಗಿ ಸುಮಾರು ಒಂದು ತಿಂಗಳಿಂದ ಸಿಂಥೆಟಿಕ್ ಡ್ರಗ್ಸ್ ಗೆ ಪ್ರಯತ್ನಿಸಿ, ಸಿಗದೇ ಇರುವುದರಿಂದ, ಅಭಯ್(೨೩), ಕಾರ್ಕಳ ನನ್ನು ಸಂಪರ್ಕಿಸುತ್ತಾನೆ. ಅಭಯ್ ಈ ಮೊದಲು ಕೆಲಸ ಮಾಡಿಕೊಂಡಿರುವ ಬೆಂಗಳೂರಿನಲ್ಲಿ ಡ್ರಗ್ಸ್ ಸಿಗುವ ಬಗ್ಗೆ ಖಚಿತಪಡಿಸಿ ಕೊಂಡು, ಶಾಹಿದ್ ಗಿರಿರಾಜುನನ್ನು ಬೆಂಗಳೂರಿಗೆ ಬರಲು ತಿಳಿಸುತ್ತಾನೆ. ಕಾರ್ಕಳದಿಂದ ಶಾಹಿದ್, ಅಲ್ತಾಫ್ ಮತ್ತು ಅಭಯ್ ನೊಂದಿಗೆ ಬೆಂಗಳೂರಿಗೆ ತೆರಳಿರುತ್ತಾರೆ. ಅಲ್ಲಿ ಒಬ್ಬ ವ್ಯಕ್ತಿಯಿಂದ ಡ್ರಗ್ಸ್‌ನ್ನು ಖರೀದಿ ಮಾಡಿ, ಗಿರಿರಾಜುಗೆ ನೀಡಿರುತ್ತಾರೆ. ಈ ಮೂರು ಆರೋಪಿಗಳು ಬ್ರೋಕರೇಜ್ ಕಮಿಷನ್ ಪಡೆದು, ಅದರಲ್ಲಿ ಸ್ವಲ್ಪ ಡ್ರಗ್ಸ್‌ನ್ನು ಅಲ್ತಾಫ್ ತಂದಿರುತ್ತಾನೆ. ಇದೇ ಡ್ರಗ್ಸ್‌ನ್ನು ಅತ್ಯಾಚಾರ ಪ್ರಕರಣದ ದಿನ ಯುವತಿಗೆ ನೀಡಿರುವುದಾಗಿದೆ. ಯುವತಿಗೆ ನೀಡಿ ಉಳಿದ ಡ್ರಗ್ಸ್‌ನ್ನು ಅಲ್ತಾಫ್ ನ ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ಗಿರಿರಾಜು ಇವನಿಂದ ಎಂಡಿಎಮ್‌ಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಟ್ಟು ೫ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಆರೋಪಿಗಳಿಗೆ ಡ್ರಗ್ಸ್ ನೀಡಿದ ವ್ಯಕ್ತಿಯನ್ನು ದಸ್ತಗಿರಿಗೆ ಬಾಕಿ ಇರುತ್ತದೆ. ಪ್ರಕರಣ ತನಿಖೆಯಲ್ಲಿರುತ್ತದೆ.