ಕ್ರೀಡಾ ಸಾಧಕರಿಗೆ ಸರ್ಕಾರ, ವಿವಿಧ ಸಂಸ್ಥೆಗಳು ಸ್ಫೂರ್ತಿ ತುಂಬಿ ಪೆÇ್ರೀತ್ಸಾಹಿಸಬೇಕು: ಡಾ. ಬಸವರಾಜೇಂದ್ರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.31- ಕ್ರೀಡಾ ಸಾಧಕರಿಗೆ ಸರ್ಕಾರ, ಸಮಾಜ, ಸಂಸ್ಥೆಗಳು, ಶಾಲಾ-ಕಾಲೇಜುಗಳು, ದಾನಿಗಳು ನಿರಂತರವಾಗಿ ಸ್ಫೂರ್ತಿಯನ್ನು ತುಂಬಿ ಪೆÇ್ರೀತ್ಸಾಹಿಸಬೇಕು ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷರು ಹಾಗೂ ಖ್ಯಾತ ವೈದ್ಯರಾದ ಡಾ. ಬಸವರಾಜೇಂದ್ರ ರವರು ತಿಳಿಸಿದರು.
ಅವರು ಕರ್ನಾಟಕ ಸೇನಾ ಪಡೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಕ್ರೀಡಾ ಸಾಧಕರಿಗೆ ಸನ್ಮಾನಿಸಿ ಮಾತನಾಡುತ್ತ ಕಳೆದ ಹಲವು ದಶಕಗಳ ಹಿಂದೆ ಬಡತನದ ಕಾರಣದಿಂದ ಕ್ರೀಡೆಗೆ ಪೆÇ್ರೀತ್ಸಾಹ ಕಡಿಮೆ ಇತ್ತು. ಆದರೆ ಇಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಕ್ರೀಡಾಪಟುಗಳಿಗೆ, ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹವನ್ನು ನೀಡಿದಾಗ ಪ್ರತಿಭೆಯ ಅನಾವರಣಗೊಳ್ಳುತ್ತದೆ. ಕ್ರೀಡೆಗೆ ಪೆÇ್ರೀತ್ಸಾಹ, ಮಾರ್ಗದರ್ಶನ ತುಂಬಾ ಅಗತ್ಯವಿದೆ ಎಂದರು. ಕರ್ನಾಟಕ ಸೇನಾ ಪಡೆ ಚಾಮರಾಜನಗರದ ರಾಷ್ಟ್ರೀಯ ಕ್ರೀಡಾಪಟುಗಳನ್ನು ಗೌರವಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಂತ ಫ್ರಾನ್ಸಿಸ್ ಶಾಲೆಯ ಪ್ರಾಚಾರ್ಯ ಪ್ರಭಾಕರ್‍ರವರು ಮಾತನಾಡಿ ಚಾಮರಾಜನಗರ ಜಿಲ್ಲೆ ಕ್ರೀಡಾಪಟುಗಳ ನಗರವಾಗಿದೆ. ಕ್ರೀಡಾಪಟುಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದಾಗ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಯಾಗಿ ಗೌರವ ತರುವ ಕಾರ್ಯವನ್ನು ಮತ್ತು ಸಾಧನೆಯನ್ನು ಖಂಡಿತವಾಗಿಯೂ ಮಾಡುತ್ತಾರೆ. ರಾಷ್ಟ್ರಮಟ್ಟದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕೀರ್ತಿ ತರುತ್ತಿರುವುದು ಬೆಳವಣಿಗೆಯ ದಿಕ್ಸೂಚಿಯಾಗಿದೆ. ಎಲ್ಲಾ ಪೆÇೀಷಕರಿಗೂ ತಮ್ಮ ಮಕ್ಕಳು ವೈದ್ಯರು ಮತ್ತು ಇಂಜಿನಿಯರಾಗಬೇಕೆಂಬ ಬಯಕೆ ಇದೆ. ಕ್ರೀಡೆಗೆ ಪೆÇ್ರೀತ್ಸಾಹ ಪೆÇೀಷಕರಿಂದ ನೀರಸವಾಗಿದೆ. ಪೆÇೀಷಕರು, ತಂದೆ ತಾಯಿಯರು, ಮಾನಸಿಕತೆ ಬದಲಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಯುವ ಜನ ಸೇವಾ ಕ್ರೀಡ ಇಲಾಖೆಯ ಸಹಾಯಕ ನಿರ್ದೇಶಕ ಶಿವಮೂರ್ತಿ ಮಾತನಾಡಿ, ಸರ್ಕಾರ ಕ್ರೀಡಾ ಇಲಾಖೆಯ ಮೂಲಕ ಹಲವು ಯೋಜನೆಗಳನ್ನು ರೂಪಿಸಿ ಕ್ರೀಡಾ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್‍ಗೌಡ ಮಾತನಾಡಿ ಚಾಮರಾಜನಗರದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮೂಲಕ ಜಿಲ್ಲೆಗೆ ಬಾಲ್ ಬ್ಯಾಡ್ಮಿಂಟನ್, ಕಬ್ಬಡ್ಡಿ, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್‍ನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಕೆಲವು ಸಾಧಕರನ್ನು ಈ ವರ್ಷದಿಂದ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಚಾಮರಾಜನಗರ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗೆ ತುಂಬಾ ಮಹತ್ವ ನೀಡಿತ್ತು. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿತ್ತು. ಇಂದು ಜಿಲ್ಲಾ ಕೇಂದ್ರವಾಗಿದ್ದರು ಪಂದ್ಯಾವಳಿಗಳು ಕಡಿಮೆಯಾಗಿದೆ ಎಂದರು.
ರಾಷ್ಟ್ರೀಯ ಕ್ರೀಡಾ ದಿನದ ಕೇಂದ್ರ ಬಿಂದು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಕುರಿತು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಒಲಂಪಿಕ್ಸ್‍ನಲ್ಲಿ ಸತತ ಮೂರು ಚಿನ್ನದ ಪದಕವನ್ನು ಗಳಿಸಿಕೊಟ್ಟ ಹಾಕಿ ಆಟಗಾರ ಧ್ಯಾನ್‍ಚಂದ್ ಭಾರತೀಯರಿಗೆ ಹೆಮ್ಮೆಯ ಗೌರವವನ್ನು ತಂದುಕೊಟ್ಟವರು. ಅತಿ ಹೆಚ್ಚು ಗೋಲ್ ಹೊಡೆಯುವ ಮೂಲಕ ಜರ್ಮನಿಯ ಹಿಟ್ಲರ್, ನೇತಾಜಿ ಸುಭಾμï ಚಂದ್ರ ಬೋಸ್ ಹಾಗೂ ಬ್ರಾಡ್ಮನ್‍ರವರ ಗಮನ ಸೆಳೆದವರು. ಧ್ಯಾನ್ ಚಂದ್ ಅಪ್ಪಟ ದೇಶಭಕ್ತ ಕ್ರೀಡಾಪಟು. ಭಾರತಕ್ಕಾಗಿ ಹೆಮ್ಮೆ ಆಟವಾಡಿದ ಧ್ಯಾನ್‍ಚಂದ್ ಅವರ ಜನ್ಮದಿನವನ್ನು ಭಾರತ ಸರ್ಕಾರ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಘೋಷಿಸಿದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ಮತ್ತಷ್ಟು ಉತ್ಸಾಹದಿಂದ, ಶಕ್ತಿಯುತವಾಗಿ, ಪರಿಣಾಮಕಾರಿಯಾಗಿ ಆಚರಿಸಿ ಹಳ್ಳಿ ಹಳ್ಳಿಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಹೊರ ತರುವ ಕಾರ್ಯಕ್ಕೆ ನಾಂದಿ ಹಾಡಬೇಕಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಕ್ರೀಡಾ ನಿಧಿಯನ್ನು ಸ್ಥಾಪಿಸಿ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹವನ್ನು ಮಾಡುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಕ್ರೀಡಾಪಟುಗಳಾದ ನಾಗರಾಜು, ಅನಂತರಾಮು, ನಂಜುಂಡಸ್ವಾಮಿ, ಮಲ್ಲೇಶ್, ಶ್ರೀನಿವಾಸ್ ಪ್ರಸಾದ್, ಶಿವು, ಮಹದೇವು, ಲಕ್ಷ್ಮಣ್ ಮುಂತಾದವರನ್ನು ಗೌರವಿಸಲಾಯಿತು. ಹೋರಾಟಗಾರರಾದ ಶಾ ಮುರಳಿ, ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆಯ ಹಿರಿಯ ನಿರ್ದೇಶಕ ರಮೇಶ್, ಕರ್ನಾಟಕ ಸೇನಾ ಪಡೆಯ ಪಣ್ಯದಹುಂಡಿ ರಾಜು, ಮಹೇಶ್ ಗೌಡ, ನಿಜಧ್ವನಿ ಗೋವಿಂದರಾಜು, ಇದ್ದರು.