ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ: ಸಂಸದ ರಮೇಶ ಜಿಗಜಿಣಗಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೩೧: ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಾಗಠಾಣ ಮಂಡಲದ ಬಿಜೆಪಿ ಸದಸ್ಯತಾ ಅಭಿಯಾನ ೨೦೨೪ರ ಕಾರ್ಯಾಗಾರವನ್ನು ಸಂಸದ ರಮೇಶ ಜಿಗಜಿಣಗಿ ಅವರು ಉದ್ಘಾಟಿಸಿದರು.
ಮಂಡಲ ಅಧ್ಯಕ್ಷ ಸಿದಗೊಂಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಸದಸ್ಯತ್ವ ಗುರಿಯನ್ನು ನಾವೆಲ್ಲರೂ ಸೇರಿ ಅಭಿಯಾನ ಮಾಡುವುದರ ಮೂಲಕ ಯಶಸ್ವಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ನಾನು ಜಯಗಳಿಸಿದ್ದು. ಆದ್ದರಿಂದ ನಾನು ಜಿಲ್ಲೆU ಕೇಂದ್ರ ಸರ್ಕಾರದಿಂದ ಸಾಕಷು ್ಟಅನುದಾನವನ್ನುತಂದಿದ್ದು, ರಾಷ್ಟ್ರೀಯ ಹೆದ್ದಾರಿಗಳು, ರೇಲ್ವೆ ಸ್ಟೇಷನ್, ವಿಮಾನ ನಿಲ್ದಾಣವನ್ನು ಮಂಜೂರು ಮಾಡಿಸಿದ್ದು ಈ ಕಾಮಗಾರಿಗಳೆಲ್ಲ ಮುಗಿಯುವ ಹಂತಕ್ಕೆ ಬಂದಿರುತ್ತವೆ. ೨೦೨೪ ಬಿಜೆಪಿ ಸದಸ್ಯರನ್ನು ಮಾಡಲು ಈ ಅಭಿಯಾನದಲ್ಲಿ ಪಾಲ್ಗೊಂಡು ನಾಗಠಾಣ ಮಂಡಲಕ್ಕೆ ನಿಗದಿ ಪಡಿಸಿದ ಗುರಿ ಮೀರಿ ಸಾಧನೆ ಮಾಡಲು ಎಲ್ಲರೂ ಅರ್ಪಣಾ ಮನೋಭಾವನೆಯಿಂದ ಶ್ರಮಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲುಗೌಡ ಪಾಟೀಲ ಮಾತನಾಡಿ, ಸದಸ್ಯತಾ ಅಭಿಯಾನದಲ್ಲಿ ಪದಾಧಿಕಾರಿಗಳು ತಮ್ಮ ಜೊತೆಗೆ ಐದು ಜನರ ತಂಡ ಮಾಡಿ ಪ್ರತಿ ಮನೆಗಳಿಗೆ ಭೇಟಿ ಕೊಟ್ಟು ಅವರ ಸೆಲ್ ಫೋನ್‌ನಿಂದ ಮಿಸ್ಡ್ಕಾಲ್ ಕೊಟ್ಟು ಅವರ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿಸುವುದು ನಿಮ್ಮ ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರತಿಯೊಬ್ಬರು ಜವಾಬ್ದಾರಿ ಅರಿತು ನಾಗಠಾಣ ಮಂಡಲದಲ್ಲಿ ಹೆಚ್ಚು ಸದಸ್ಯರನ್ನು ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಸಂಚಾಲಕÀ ಚಿದಾನಂದ ಚಲವಾದಿ, ಜಿಲಾ ್ಲಉಪಾಧ್ಯಕ್ಷÀ ಮಹೇಂದ್ರ ನಾಯಕ, ನವೀನ ಅರಿಕೇರಿ, ಸಮೀರ್ ಕುಲಕರ್ಣಿ, ಶರತ್‌ಸಿಂಗ್ ರಜಪೂಂತ, ಸಿದ್ದು ದಸ್ತರಡ್ಡಿ, ಮಂಡಲ, ಮೋರ್ಚಾ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ, ಬೂತ್ ಅಧ್ಯಕ್ಷರು, ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.