ಆರೋಗ್ಯಕರ ಜೀವನಕ್ಕಾಗಿ ಸ್ವಚ್ಚತೆ ಕಾಪಾಡಿ : ಘಾಟೆ
ಸಂಜೆವಾಣಿ ವಾರ್ತೆ
ಔರಾದ : ಆ.೩೧:ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನ ಮತ್ತು ಕೌಟುಂಬಿಕ ಹಂತದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದೇ ಆರೋಗ್ಯದ ಬುನಾದಿ ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಸ್ವಚ್ಛತೆ ಕಾಪಾಡಬೇಕು ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ತಾಲೂಕಿನ ಬೊಂತಿ ಪಂಚಾಯತನಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಸುತ್ತ ಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವಂತೆ ಹೇಳಿದರು, ಸ್ವಚ್ಛತೆ ಕಾಪಾಡಿಕೊಂಡು ಹೋಗುವುದರಿಂದ ಡೆಂಗ್ಯು ರೋಗ ಹರಾಡುವುದನ್ನು ತಡೆಯಬಹುದು ತಿಳಿಸಿದರು.
ಸಂಪೂರ್ಣತಾ ಅಭಿಯಾನ ಕಾರ್ಯಕ್ರಮ ಶಾಲಾ ಮಕ್ಕಳ ರ್ಯಾಲಿ ಮುಖಾಂತರ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಯಿತು ಹಾಗೂ ಸಂಪೂರ್ಣತಾ ಅಭಿಯಾನದ ಆರು ಸೂಚಂಕಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು ಹಾಗೂ ಆರು ಸೂಚಂಕ ಪ್ರಗತಿ ಹೊಂದಲು ಸಲಹೆ ಸೂಚನೆಗಳು ಸಹ ನೀಡಲಾಯಿತು,
ಗ್ರಾಮದಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮದ ಜನರಿಗೆ ತಪಾಸಣೆ ಮಾಡಲಾಯಿತು
ಕಾರ್ಯಕ್ರಮದಲಿ ಶರತ ಪಾಟೀಲ್, ಗ್ರಾ.ಪಂ ಪಿಡಿಓ,ತಾಲ್ಲೂಕಿ ತಾಂತ್ರಿಕ ಸಂಯೋಜಕರು ಆನಂದ, ಓಶಿನ, ಸುದರ್ಶನ, ದಾಬಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ.ಅಮಿತ ಪೌಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೋಭಾ, ಶಿವಾನಂದ, ಆನಂದ ಸೇರಿದಂತೆ ಇನ್ನಿತರರಿದ್ದರು.