ಎಲ್ಲೆಂದರಲ್ಲಿ ಕಸದ ರಾಶಿ; ಸಿಗಬೇಕಿದೆ ಮುಕ್ತಿ
(ನಾಗರಾಜ ಕುಂಬಾರ )
ಕೊಲ್ಹಾರ:ಆ.೩೧: ಪಟ್ಟಣದ ಯುಕೆಪಿ ಕ್ರಾಸ್ ಮೂಲಕಹಾದು ಹೋಗಿರುವ ರಾಜ್ಯದ ಪ್ರಮುಖ ಹೆದ್ದಾರಿಯಾದ ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ೨೧೮ ರಲ್ಲಿ ಪ್ರತಿನಿತ್ಯ ರಸ್ತೆ ಬದಿಗಳಲ್ಲಿ ಖಾಲಿ ಇರುವ ಜಾಗಗಳು ಕಸ ಹಾಕುವ ತಾಣಗಳಾಗಿ ಮಾರ್ಪಟ್ಟಿವೆ. ಅಲ್ಲದೇ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿವೆ. ಕಸ ಹಾಕುವುದರಿಂದ ಅದು ಅಲ್ಲೆ? ಕೊಳೆತು ದುರ್ವಾಸನೆ ಉಂಟಾಗುತ್ತಿದೆ. ಇದರಿಂದ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಅಲ್ಲದೇ ರಸ್ತೆ ಬದಿಯಲ್ಲೆ? ಕಸ ಹಾಕುತ್ತಿರುವುದರಿಂದ ತ್ಯಾಜ್ಯವೆಲ್ಲ ರಸ್ತೆಗೆ ಬರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ
ಕೆನೆ ಮೊಸರು, ದೇಸಿ ಮೀನಿಗೆ ಹೆಸರಾದ ಕೊಲ್ಹಾರ ಅಲ್ಲಿರುವ ಕೊರ್ತಿ ಕೊಲ್ಹಾರ ಸೇತುವೆ.ಕರ್ನಾಟಕ ರಾಜ್ಯದ ಅತೀ ಉದ್ದದ ಸೇತುವೆ ಎಂಬ ಕೀರ್ತಿಗೂ ಪಾತ್ರವಾಗಿರುವ ಈ ಸೇತುವೆ ವಿಜಯಪುರ ಜಿಲ್ಲೆಯಿಂದ ಹಲವಾರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಕೇವಲ ಸೇತುವೆಯಾಗದೇ ಪ್ರವಾಸಿಗರ ಗಮನ ಸೆಳೆಯುವ ವೇದಿಕೆಯಾಗಿದೆ.
ಆದರೆ ಇಲ್ಲಿ ಯುಕೆಪಿ ಕ್ರಾಸಗೆ ಹೊಸದಾಗಿ ಕಾಲಿಟ್ಟವರಿಗೆ ಕಸದ ರಾಶಿ, ಗಬ್ಬು ವಾಸನೆ ಸ್ವಾಗತಿಸುತ್ತದೆ. ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದರೆ ರಸ್ತೆ ಬದಿ, ಅಂಗಡಿ ಬದಿ, ಖಾಲಿ ಜಾಗಗಳಲ್ಲಿ ಕಸದ ರಾಶಿಯ ದರ್ಶನವಾಗುತ್ತದೆ. ಸ್ಥಳೀಯ ಆಡಳಿತವು ಕಸಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸುತ್ತಿದ್ದರೂ ಯಶಸ್ವಿಯಾಗುತ್ತಿಲ್ಲ
ಡೆಂಗಿ, ಮಲೇರಿಯ ಸಂಕ್ರಾಮಿಕ ರೋಗಹರಡುವ ಭೀತಿ ಇದೆ. ಇದೇ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು,ವೃದ್ಧರು ಸೇರಿದಂತೆ ತಿರುಗಾಡುವ ದುಸ್ಥಿತಿ ಇದೆ.
ಶೌಚಾಲಯದ ಸ್ಥಿತಿ: ಸಾರ್ವಜನಿಕ ಶೌಚಾಲಯವಿದ್ದು, ಅಲ್ಲಿಗೆ ಹೋಗಿ ಬರಲು ಸಾಧ್ಯವಾಗದಷ್ಟು ಈ ಕಸದ ಗಿಡಗಳು ಬೆಳೆದು ನಿಂತಿವೆ. ಆವರಣದ ಸುತ್ತಲಿನ ಎಲ್ಲಿ ನೋಡಿದರಲ್ಲಿ ತ್ಯಾಜ್ಯದ ರಾಶಿ ಹಾಗೂ ಕಸದ ಗಿಡ ಗಂಟಿಗಳು ಬೆಳೆದು ನಿಂತಿದೆ
ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ರೀತಿಯ ಇಂತಹ ತ್ಯಾಜ್ಯ ತಂದು ಎಸೆಯುವುದರಿಂದ ಕಸದ ರಾಶಿಗಳು, ಕೊಳಚೆಯ ತಾಣವೂ ಆಗಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭಯದಲ್ಲೇ ಬದುಕುವಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ್ ಬಣ)ತಾಲೂಕ ಸಹ ಸಂಚಾಲಕರಾದ ರಾಜು ಇವಣಗಿ ಹೇಳಿದರು
ಯಾವುದೇ ಪಟ್ಟಣ ಉತ್ತಮ ಎನಿಸಿಕೊಳ್ಳುವುದರಲ್ಲಿ ಸ್ವಚ್ಛತೆಯು ಮಹತ್ತರ ಪಾತ್ರ ವಹಿಸುತ್ತದೆ. ಅದಕ್ಕಾಗಿ ಪಟ್ಟಣದ ಘನತ್ಯಾಜ್ಯ ನಿರ್ವಹಣೆ ಜೊತೆಗೆ, ಸೌಂದರ್ಯೀಕರಣಕ್ಕೆ ಸ್ಥಳೀಯ ಆಡಳಿತಗಳು ವಿಶೇಷ ಒತ್ತು ನೀಡುತ್ತವೆ. ನೈರ್ಮಲ್ಯವು ಸ್ವಚ್ಛ ಪಟ್ಟಣವೆಂಬ ಹಣೆಪಟ್ಟಿಯನ್ನಷ್ಟೇ ತಂದುಕೊಡದೆ, ಅಲ್ಲಿನ ಜನರಿಗೆ ಉತ್ತಮ ಆರೋಗ್ಯದ ಖಾತ್ರಿಯನ್ನು ಸಹ ನೀಡುತ್ತದೆ
ಎಲ್ಲೆಂದರಲ್ಲಿ ಕಸದ ರಾಶಿ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಬದುಕುವಂತಾಗಿದೆ.
ಭೀಮ್ ಆರ್ಮಿ ಕರ್ನಾಟಕ ಏಕ್ತಾ ಮಿಷನ ಕೊಲ್ಹಾರ ಗೌರವ ಅಧ್ಯಕ್ಷ ಮಾರುತಿ ಕುದಿರಿ