ರಕ್ತದ ಹನಿ ಬೀಳದೇ ಸ್ವಾತಂತ್ರö್ಯ ಪಡೆದ ದೇಶ ಭಾರತ:ಪಾಟೀಲ
ಬೀಳಗಿ:ಅ.೩:ಇಡಿ ಜಗತ್ತಿನಲ್ಲಿ ಭೂಮಿಯ ಮೇಲೆ ಒಂದು ಹನಿ ರಕ್ತ ಬೀಳದೆ ಯುದ್ದದ ಮುಖಾಂತರ ಸ್ವಾತಂತ್ರö್ಯ ಪಡೆದ ರಾಷ್ಟçವೆಂದರೆ ಅದು ನಮ್ಮ ಭಾರತ. ಮಹಾತ್ಮಾ ಗಾಂಧಿಜೀಯವರ ಸ್ವಾತಂತ್ರö್ಯ ಹೋರಾಟದಲ್ಲಿ ಭಗತ್‌ಸಿಂಗ್‌ನAತ ದೇಶ ಪ್ರೇಮಿಗಳು ಲಕ್ಷಾಂತರ ಜನರು ಬಲಿದಾನವಾಗಿದ್ದಾರೆ ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ ರಾಷ್ಟçಪತಿ ಮಹಾತ್ಮಾ ಗಾಂಧೀ ಹಾಗೂ ಲಾಲ್ ಬಹಾದ್ದೂರ್ ಶಸ್ತಿçಜೀಯವರ ಜಯಂತಿಯ ಪ್ರಯುಕ್ತ ಸ್ವಾತಂತ್ರೊö್ಯÃತ್ಸವದ ಜಾಗೃತಿಗಾಗಿ ಶಾಂತಿ ನಡಿಗೆಯ ನೇತ್ರತ್ವ ವಹಿಸಿ ಅವರು ಮಾತನಾಡಿದರು.
ಗಾಂಧಿಜೀಯವರು ಅವರ ಜೀವನದಲ್ಲಿ ಅಂತ್ಯದವರೆಗೂ ದು:ಖವನ್ನು ನುಂಗಿ, ಎದುರಿಸಿ ದೇಶಕ್ಕೆ ಸ್ವಾತಂತ್ರö್ಯವನ್ನು ತಂದು ಕೊಟ್ಟವರು. ದೇಶದ ಅತ್ಯಂತ ಪ್ರಾಮಾಣಿಕ ಪ್ರಧಾನಮಂತ್ರಿ ಎಂದರೆ ಅದು ಲಾಲ್ ಬಹಾದ್ದೂರ್ ಶಾಸ್ತಿçಯವರು. ಅತ್ಯಂತ ಪರಿಶುದ್ಧ ರಾಜಕೀಯ ಮಾಡಿದವರು. ಇಂದು ರಾಜಕೀಯವನ್ನು ಕೀಳಮಟ್ಟದಲ್ಲಿ ನೋಡುವಂತಾಗಿದೆ ಎಂದರು.
ಕಾರ್ಯಕ್ರಮಕ್ಕಿಂತ ಮೊದಲು ಪಟ್ಟಣದ ಕಾಂಗ್ರೆಸ್ ಕಾರ್ಯಲಯದಿಂದ ಗಾಂಧಿ ವೃತ್, ಬಸ್ ನಿಲ್ದಾಣ, ಡಾ.ಅಂಬೇಡ್ಕರ್ ವೃತ್, ಬಸವ ವೃತ್‌ದ ಮೂಲಕ ಶಿವಾಜಿ ವೃತ್ತದವರೆಗೆ ನೂರಾರು ಕಾರ್ಯಕರ್ತರೊಂದಿಗೆ ಜನ ಜಾಗೃತಿ ಕಾಲ ನಡಗೆ ಜಾಥಾ ನಡೆಸಿ, ಸ್ವಚ್ಚತಾ ಆಂಧೋಲನ ಪ್ರತಿಜ್ಞಾ ವಿಧಿ ಶಾಸಕರು ಬೋಧಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಮಹಾದೇವ ಹಾದಿಮನಿ, ರಮೇಶ್ ಬಗಲಿ ಮಾತನಾಡಿದರು. ಬಸವರಾಜ ಹಳ್ಳದಮನಿ, ಎಂ.ಎಲ್.ಕೆAಪಲಿAಗಣ್ಣವರ್, ಆಶಾ ಬೀಳಗಿ, ಸಿದ್ದು ಸಾರಾವರಿ, ರಹಿಮಾನ್ ಬಾಗವಾನ, ಕಿರಣ ಬಾಳಾಗೋಳ, ಜುಂಜುರಿ, ಪಡಿಯಪ್ಪ ಕರಿಗಾರ, ಮಲ್ಲಪ್ಪ ಕಾಳಗಿ, ಅಣವೀರಯ್ಯ ಪ್ಯಾಟೀಮಠ, ಡಾ.ಸಾಗರ ತೆಕ್ಕೆನ್ನವರ್, ಶ್ರೀಶೈಲ್ ಸೂಳಿಕೇರಿ, ಅನೀಲ್ ಗಚ್ಚಿನಮನಿ, ರಾಜು ಬೋರ್ಜಿ, ದೊಡ್ಡಣ್ಣಗೌಡ ದೇಸಾಯಿ ಇತರರು ಇದ್ದರು.