ಹನೂರು ಪಟ್ಟಣದ ಚೆಸ್ಕಾಂ ಇಲಾಖೆ ಆವರಣದಲ್ಲಿ ಜನ ಸಂಪರ್ಕ ಸಭೆ
ಸಂಜೆವಾಣಿ ವಾರ್ತೆ
ಹನೂರು ಆ 3 :- ರೈತರು ವಿದ್ಯುತ್ ಇಲಾಖೆಗೆ ಸಂಬಂಧ ಪಟ್ಟ ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗೆ ಬಂದಲ್ಲಿ, ಸಿಬ್ಬಂದಿಗಳು ಅವರ ಕೆಲಸ ಕಾರ್ಯಗಳನ್ನ ಅತಿ ಜಾರೂರಾಗಿ ಮಾಡಬೇಕೆಂದು ಕೊಳ್ಳೇಗಾಲ ಚಾ.ವಿ.ಸ.ನಿ.ನಿ,ಇ.ಇ ಅನಿತಾ ಅವರು ತಿಳಿಸಿದರು.
ಹನುರು ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಉಪ ವಿಭಾಗದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು 5 ಎಕರೆ ಒಳಗೆ ಇರುವ ಬರಡು ಭೂಮಿ ಸೋಲಾರ್ ಪ್ಲಾಟ್ ಅಳವಡಿಲು ಅವಕಾಶವಿದೆ ಪ್ರತಿ ಎಕರೆಗೆ 25 ಸಾವಿರ ರೂ.ಗಳು ನೀಡಲಾಗುತ್ತದೆ.
ಸೋಲಾರ್ ಪ್ಲಾಟ್ ಅಳವಡಿಸಲು ರೈತರು ಮುಂದೆ ಬಂದರೆ ತಮ್ಮ ಜಮೀನಿನಲ್ಲಿ ಸ್ಥಳವಕಾಶ ಇದ್ದಲ್ಲಿ ನಮಗೆ ತಿಳಿಸಿ. ಸೋಲಾರ್ ಪ್ಲಾಟ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸೋಲಾರ್ ಪ್ಲಾಟ್ ನಿರ್ಮಿಸುವುದರಿಂದ ವಿದ್ಯುತ್ ಸಮಸ್ಯೆ ಇರುವುದಿಲ್ಲ, ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ವಿದ್ಯುತ್ ತಂತಿ ಜೋತು ಬಿದ್ದಿರುವುದು, ಮನೆಯ ಮೇಲೆ ವಿದ್ಯುತ್ ತಂತಿ ಹಾದು ಹೋಗಿರುವುದು, ವಿದ್ಯುತ್ ಕಂಬದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನ ತೆರವು ಗೊಳಿಸುವುದು, ರಾತ್ರಿ ವೇಳೆಯಲ್ಲಿ ವಿದ್ಯುತ್ ಇಲ್ಲದಿರುವುದು ಈ ಸಮಸ್ಯೆಗಳನ್ನ ಅತಿ ಶೀಘ್ರದಲ್ಲಿ ಬಗೆಹರಿಸುವಂತೆ ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದರು.
ಹೂಗ್ಯಂ ಗ್ರಾಮದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಅಳವಡಿಸಿ ಕೊಟ್ಟರೆ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ರೈತರು ರೈತರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಇಇ ಅನಿತಾ ರವರು ನಿಮ್ಮ ಗ್ರಾಮದಲ್ಲಿ ಸರ್ಕಾರಿ ಸ್ಥಳವನ್ನ ಗುರುತಿಸಿ ಕೊಟ್ಟರೆ ನಮ್ಮ ಇಲಾಖೆ ವತಿಯಿಂದ ಪವರ್ ಸ್ಟೇಷನ್ ಮಾಡಲಾಗುತ್ತದೆ. ಆದ್ದರಿಂದ ಇಲ್ಲಿನ ರೈತರಿಗೆ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರ್ ಮಾತನಾಡಿ ರೈತರು ಹಾಗೂ ಸಾರ್ವಜನಿಕರಿಂದ 26 ದೂರು ಅರ್ಜಿಗಳು ಬಂದಿದ್ದು, ಸಮಸ್ಯೆಗಳನ್ನ ನಾವು ಬಗೆಹರಿಸದಿದ್ದಲ್ಲಿ, ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೆಕ್ಟರ್ ಆಫೀಸರ್ ಶ್ರೀನಿಧಿ, ಎಂ.ಇ ರಂಗಸ್ವಾಮಿ, ಜೆಇ ಗಳಾದ ವೆಂಕಟೇಶ್, ಮಾದೇಶ್, ವೆಂಕಟೇಶ್ ಮೂರ್ತಿ ಹಾಗೂ ಸಭೆಯಲ್ಲಿ ರೈತರು, ಸಾರ್ವಜನಿಕರು ಹಾಜರಿದ್ದರು.