ಮಹಾತ್ಮಗಾಂಧಿ ಯವರ 155 ನೇ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.03: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಮಿನಿ ವಿಧಾನದಸೌಧದ ಆಡಳಿತ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಯವರ 155 ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಶಾಸಕ ಹೆಚ್.ಟಿ.ಮಂಜು ಮಹಾತ್ಮಗಾಂಧಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿ ಮಹಾತ್ಮಗಾಂಧಿ ಯವರ ನೇತೃತ್ವದಲ್ಲಿ ಸ್ವಾತಂತ್ರ್ಯಪಡೆದ ನಮ್ಮ ದೇಶ ಇಂದು ಸ್ವತಂತ್ರವಾಗಿ ಆಡಳಿತ ನಡೆಸುತ್ತಿದೆ ಅಂತಹ ಮಹಾತ್ಮನಿಗೆ ಕೃತಜ್ಞತೆ ಸಲ್ಲಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದರು.
ಮಹಾತ್ಮ ಗಾಂಧೀಜಿ ಯವರು ಜಗತ್ತು ಕಂಡ ಶ್ರೇಷ್ಠ ಚಿಂತಕ ಮತ್ತು ದಾರ್ಶನಿಕ. ದೇಶ ಹಾಗೂ ಸಮಾಜಕ್ಕಾಗಿ ಹೋರಾಡಿದ ಅವರ ವಿಚಾರಧಾರೆಗಳು ದಿನೇ ದಿನೇ ಪ್ರಸ್ತುತವಾಗುತ್ತಿವೆ. ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕೂಡ ಆಗಿವೆ ಪ್ರಪಂಚದ ಯಾವುದೇ ದೇಶದಲ್ಲಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಉದಾಹರಣೆಗಳಿಲ್ಲ. ಆದರೆ ದೇಶಕ್ಕೆ ಮಹಾತ್ಮಗಾಂಧೀಜಿಯವರು ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರಾಗಿದ್ದಾರೆ. ಮಹಾತ್ಮಗಾಂಧಿ ಯವರು ನಮ್ಮನ್ನು ಅಗಲಿದ್ದರೂ ಅವರ ವಿಚಾರಧಾರೆ ಸದಾ ಜೀವಂತವಾಗಿವೆ. ಅವರ ವಿಚಾರಗಳು ಪ್ರಸ್ತುತ ಅಷ್ಟೇ ಅಲ್ಲ, ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು. ಗಾಂಧೀಜಿಯವರ ಆದರ್ಶಗಳನ್ನು ಪಾಲನೆ ಮಾಡದ ಕಾರಣ ದೇಶದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಮಹಾತ್ಮ ಗಾಂಧೀಜಿ ಜಗತ್ತಿಗೆ ಅನಿವಾರ್ಯ ಗಾಂಧೀಜಿ ಭಾರತಕಷ್ಟೇ ಸೀಮಿತವಲ್ಲ, ಅವರು ಜಗತ್ತಿಗೇ ನಾಯಕರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಯು.ಎಸ್.ಅಶೋಕ್ ಕುಮಾರ್, ಶಿರಸ್ತೆದಾರ್ ರವಿ,ರಾಜಸ್ವನೀರಿಕ್ಷಕ ಜ್ಞಾನೇಶ್ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.