ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಆಚರಣೆ
ಇಂಡಿ:ಅ.೩: ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ವಿಭಾಗದ ಪ್ರಾಚಾರ್ಯರಾದ ಪ್ರಕಾಶ ಪಾಟೀಲ್ ಅವರು ಮಾತನಾಡುತ್ತಾ, ಮಹಾತ್ಮಾ ಗಾಂಧೀಜಿಯವರ ಅಹಿಂಸಾತತ್ವ ಹಾಗೂ ನಾಯಕತ್ವದ ಗುಣಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಅಲ್ಲಾಭಕ್ಷ ಉಕ್ಕಲಿ, ಜುಬೇರ್ ಸೈಯ್ಯದ್, ಶಿಕ್ಷಕಿಯರಾದ ಜ್ಯೋತಿ ಅಂಬಿಗರ ಅವರು ಮಾತನಾಡಿ ಗಾಂಧೀಜಿಯವರ ಹಾಗೂ ಶಾಸ್ತ್ರೀಜಿಯವರ ಸ್ವಾತಂತ್ರö್ಯ ಹೋರಾಟ ಹಾಗೂ ದೇಶಪ್ರೇಮದ ತ್ಯಾಗದ ಮನೋಭಾವನೆಯ ಗುಣಗಳು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಿವೆ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಫ್ . ಕೆ ದೋಶಿ ವಿಜ್ಞಾನ ವಿಭಾಗದ ಉಪನ್ಯಾಸಕರು, ಸಂಸ್ಥೆಯ ಸರ್ವ ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶಿಕ್ಷಕರಾದ ಭೀಮರಾಯ ಕಡಿಹಳ್ಳಿ ಅವರು ನಿರೂಪಿಸಿದರು.