ಶರಣರ ಮಹಾಕಾವ್ಯಗಳು ಸರ್ವಶ್ರೇಷ್ಠ ಕಾವ್ಯಗಳು
ಕಲಬುರಗಿ:ಆ.30:ಮಹಾದಾಸೋಹಿ ಶರಣಬಸವೇಶ್ವರ ಕುರಿತು ಹೊರ ತಂದ ಮಹಾಕಾವ್ಯಗಳು ಸರ್ವಕಾಲಕ್ಕೆ ಶ್ರೇಷ್ಠ ಮಹಾಕಾವ್ಯಗಳಾಗಿವೆ ಎಂದು ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಉಪಪ್ರಚಾರ್ಯೆ ಶ್ರೀಮತಿ ಸುಂದರಬಾಯಿ ನಾಗಶೆಟ್ಟಿ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ಮಹಾಕಾವ್ಯಗಳು ಎಂಬ ವಿಷಯ ಕುರಿತು ಮಾತನಾಡಿದರು.
ಮಹಾಕಾವ್ಯ , ದೀರ್ಘ ನಿರೂಪಣಾ ಕವಿತೆ ವೀರರ ಕಾರ್ಯಗಳನ್ನು ವಿವರಿಸುತ್ತದೆ. ಒಂದು ಮಹಾಕಾವ್ಯವು ಅಂತಹ ವಿವಿಧ ವಿಷಯಗಳೊಂದಿಗೆ ವ್ಯವಹರಿಸಬಹುದು ಪುರಾಣ , ವೀರದಂತಕಥೆಗಳು , ಇತಿಹಾಸಗಳು, ಧಾರ್ಮಿಕ ಕಥೆಗಳು, ತಾತ್ವಿಕ ಅಥವಾ ನೈತಿಕ ಸಿದ್ಧಾಂತಗಳು ಒಳಗೊಂಡಿರುತ್ತದೆ. ಅದರಲ್ಲೂ ಜನಪದ ಮಹಾಕಾವ್ಯಗಳು ಕರ್ನಾಟದಲ್ಲಿ ಬಹಳಷ್ಟು ಹೊರ ಬಂದಿವೆ. ಮಲೆ ಮಾದೇಶ್ವರ ಕಾವ್ಯ’ ಮತ್ತು ‘ಮಂಟೇಸ್ವಾಮಿ ಕಾವ್ಯ’ಗಳು, ಕೃಷ್ಣಗೊಲ್ಲರ ಕಾವ್ಯ, ಜುಂಜಪ್ಪನ ಕಾವ್ಯ, ಎಲ್ಲಮ್ಮನ ಕಾವ್ಯ, ಕುಮಾರರಾಮನ ಕಾವ್ಯ ಮತ್ತು ಕರಾವಳಿ ಕರ್ನಾಟಕದ ಸಿರಿ ಮಹಾಕಾವ್ಯಗಳು ಕರ್ನಾಟಕದ ಪ್ರಮುಖ ಜನಪದ ಮಹಾಕಾವ್ಯಗಳು. ಶರಣಬಸವೇಶ್ವರ ಕುರಿತಾಗಿ ಹಲವಾರು, ಪುರಾಣಗಳು ಗ್ರಂಥಗಳು, ಕಾದಂಬರಿಗಳು, ಕವನಗಳು, ನಾಮವಾಳಿಗಳು, ಚರಿತ್ರೆಗಳು ಹೊರಬಂದಿವೆ. ಶರಣರ ಕುರಿತು ಮರಾಠಿ, ತೆಲಗು, ಹಿಂದಿ, ಆಂಗ್ಲ ಭಾμÉಯಲ್ಲಿ ಪುರಾಣಗಳು ಪ್ರಕಟಗೊಂಡಿವೆ. ಜನಪದ ತ್ರಿಪದಿಗಳಲ್ಲಿ ದಾಸೋಹ ಭಂಡಾರಿ ಶರಣಬಸವರ ಜನಪದ ಮಹಾಕಾವ್ಯವನ್ನು ನಿವೃತ್ತ ಪ್ರಾಚಾರ್ಯೆ ಡಾ.ನೀಲಾಂಬಿಕಾ ಪೆÇೀಲಿಸ್ ಪಾಟೀಲರು 2021 ರಲ್ಲಿ ಸಂಗ್ರಹಿಸಿ ಸಂಪಾದಿಸಿದ್ದಾರೆ. ಶರಣಬಸವರ ಜೀವನ ಚರಿತ್ರೆಯುಳ್ಳ ಬೃಹತ ಕಾವ್ಯ ಇದಾಗಿದೆ. 11111 ಜನಪದ ತ್ರಿಪದಿಗಳನ್ನು ಈ ಕಾವ್ಯ ಹೊಂದಿದೆ. 254 ಅಧ್ಯಾಯಗಳನ್ನು ತ್ರಿಪದಿ, ದ್ವಿಪದಿ ಅಲ್ಲದೆ ಚೌಪದಿಯಲ್ಲೂ ಈ ಕಾವ್ಯ ರಚನೆಯಾಗಿದೆ. ಕಲಬುರಗಿ, ಬೀದರ ಜಿಲ್ಲೆಗಳಿಂದ ಅನೇಕ ಶರಣ ಭಕ್ತರಿಂದ ಸಂಗ್ರಹಿಸಿ ಹೊರತರಲಾಗಿದೆ. ಇದೊಂದು ವಿಶಿಷ್ಟವಾದ ಮಹಾಕಾವ್ಯವಾಗಿದ್ದು ಆಡು ಭಾμÉಯ ಪದಗಳು ಓದುಗರಿಗೆ ಸರಳವಾಗಿ ತಿಳಿಯುವಂತಾಗಿವೆ. ಈ ಮಹಾಕಾವ್ಯವು ಶರಣಬಸವೇಶ್ವರ ಸಂಸ್ಥಾನದಿಂದಲೆ ಪ್ರಕಟಗೊಂಡಿದೆ. ಇದು ಅಲ್ಲದೆ ಹಿರಿಯ ಪ್ರಾಧ್ಯಾಪಕರಾದ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಅವರು ಶ್ರೀ ಶರಣಬಸವ ಮಹಾದಾಸೋಹ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ. 1262 ಪದ್ಯಗಳುಳ್ಳ 5108 ಸಾಲುಗಳಲ್ಲಿ ಈ ಕಾವ್ಯ ರಚನೆಯಾಗಿದೆ. ಶರಣಬಸವೇಶ್ವರ ಸಂಪೂರ್ಣ ಜೀವನ ಚರಿತ್ರೆಯನ್ನು ಈ ಕಾವ್ಯ ತಿಳಿಸುತ್ತದೆ ಎಂದು ಹೇಳಿದರು.