ಅನಧಿಕೃತವಾಗಿ ಆಟೋಗಳಿಗೆ ಗ್ಯಾಸ್ ರೀಫಿಲ್ಲಿಂಗ್: ಆಹಾರ ಇಲಾಖೆ ಅಧಿಕಾರಿಗಳ ದಾಳಿ
ಕಲಬುರಗಿ,ಆ.30-ನಗರದ ತಾಜಸುಲ್ತಾನಪುರ ರಿಂಗ್ ರೋಡ್ ಹತ್ತಿರ ಫತ್ರಾ ಶೆಡ್‍ನಲ್ಲಿ ಅನಧಿಕೃತವಾಗಿ ಅಡುಗೆ ಅನಿಲ ಸಿಲಿಂಡರ್‍ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಆಟೋ ರೀಕ್ಷಾಗಳಿಗೆ ತುಂಬಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಪಾಟೀಲ ಅವರು ಚೌಕ್ ಪೊಲೀಸ್ ಠಾಣೆಯ ಎಎಸ್‍ಐ ಬಾಬುರಾವ ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ 6 ಸಾವಿರ ರೂಪಾಯಿ ಮೊತ್ತದ ಹೆಚ್‍ಪಿ ಕಮಪನಿಯ ತುಂಬಿದ 2 ಗ್ಯಾಸ್ ಸಿಲಿಂಡರ್, 1500 ರೂ.ಮೊತ್ತದ ಖಾಲಿ ಗ್ಯಾಸ್ ಸಿಲಿಂಡರ್, 4 ಸಾವಿರ ರೂ.ಮೊತ್ತದ ತೂಕದ ಯಂತ್ರ ಸೇರಿ 14,500 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಪರವಾನಿಗೆ ಇಲ್ಲದೆ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ದುಬೈ ಕಾಲೋನಿಯ ರಾಚಯ್ಯಸ್ವಾಮಿ, ಜಾಗದ ಮಾಲೀಕ ಕಾವೇರಿ ನಗರದ ಶ್ರೀನಿವಾಸ ವಾಗ್ಮೋರೆ ವಿರುದ್ಧ ಕಲಂ 3 & 7 ಅಗತ್ಯ ವಸ್ತುಗಳ ಕಾಯಿದೆ -1955 ಹಾಗೂ ಕಲಂ 6 & 7 ಲಿಕ್ವಿಪೈಢ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000 ಅಡಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.