ಸೇಡಂ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಸೇಡಂ,ಆ.30-ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮೇಜರ್ ಧ್ಯಾನಚಂದ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಶಶಿಶೇಖರ ರೆಡ್ಡಿಯವರು ಮೇಜರ್ ಧ್ಯಾನಚಂದ್ ಅವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಪಂಡಿತ ಬಿ.ಕೆ.ಯವರು ಕ್ರೀಡೆ ವಿದ್ಯಾರ್ಥಿಗಳ ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು. ದೈಹಿಕ ನಿರ್ದೇಶಕರಾದ ಡಾ.ಜಗನ್ನಾಥ ಪಟ್ಟಣಕರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕ್ರೀಡೆಗಳ ಬಗ್ಗೆ ನಿರಾಸಕ್ತಿ ತೋರುತ್ತಿರುವುದು ಚಿಂತಾಜನಕವಾಗಿದೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಹೆಚ್ಚಿನ ಗೌರವ ತರುವ ಕಾರ್ಯವಾಗಬೇಕು ಎಂದು ಹೇಳಿದರು. ಡಾ.ಅಂಬಣ್ಣ ಭಾವಿಮನಿ ಸ್ವಾಗತಿಸಿದರು, ಡಾ. ವಿಲಾಸ ಸಾಳುಂಕೆ ನಿರೂಪಿಸಿದರು, ಡಾ. ತ್ರಿವಿಕ್ರಮ ವಂದನಾರ್ಪಣೆ ಸಲ್ಲಿಸಿದರು.
ಡಾ. ಶಂಕರ ಬತ್ತಾಸೆ, ಡಾ. ಮಲ್ಲಿಕಾರ್ಜುನ ಮುಗಳಿ, ಡಾ. ಶಕೇರಾ ತನ್ವೀರ್, ಡಾ. ಪಂಡಿತ ಬಿ. ಕೆ, ಡಾ. ಶಶಿಶೇಖರ ರೆಡ್ಡಿ, ಡಾ. ಜಗನ್ನಾಥ ಪಟ್ಟಣಕರ, ಡಾ. ವಿಲಾಸ ಸಾಳುಂಕೆ, ಡಾ. ತ್ರಿವಿಕ್ರಮ, ಡಾ. ಲಕ್ಷ್ಷಿ, ಡಾ ಮಹಬೂಬ ಪಾಷಾ. ಡಾ. ಮೋಹನಗೌಡ, ಡಾ. ಅಶೋಕ ಬೆಣ್ಣೂರ, ಡಾ. ರವಿ, ಡಾ. ಅರುಣಾ ತಂಬಾಕೆ ಹಾಗು ಇತರರು ಉಪಸ್ಥಿತರಿದ್ದರು.