24 ಗಂಟೆಗಳ ಕಾಲ ಮಹಾ ರುದ್ರಾಭಿಷೇಕ
ಕಲಬುರಗಿ,ಆ.30-ಪ್ರತಿ ವರ್ಷದಂತೆ ಶ್ರಾವಣ ಮಾಸದ ಪ್ರಯುಕ್ತ ಅಫಜಲಪುರ ತಾಲ್ಲೂಕಿನ ನೀಲೂರ ಗ್ರಾಮದ ಬಂಗಾರ ಜಡೇ ನೀಲಕಂಠೇಶ್ವರ ಗೋಣಿರುದ್ರೇಶ್ವರ ಹಿರೇಮಠದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ಪ್ರಯುಕ್ತ ಈ ವರ್ಷವೂ ಕೂಡ ಪ್ರತಿ ದಿನ ಬಂಗಾರ ಜಡೇ ನೀಲಕಂಠೇಶ್ವರರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ನಡೆದುಕೊಂಡು ಬಂದಿದ್ದು, ಸೆ.5. ರಂದು ಮುಕ್ತಾಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತನ್ನಿಮಿತ್ಯ ಸೆ.4 ರಂದು ಮುಂಜಾನೆ 6. ಗಂಟೆಯಿಂದ ಸೆ.5.ರ ಮುಂಜಾನೆ 6.00 ಗಂಟೆವರೆಗೆ ಸತತ 24 ಗಂಟೆಗಳ ಕಾಲ ಮಹಾ ರುದ್ರಾಭಿಷೇಕ ನಡೆಸಲಾಗುವುದು. ತದನಂತರ ವಿಶೇಷ ಮಹಾಪ್ರಸಾದ ವಿತರಣೆ ನಡೆಯಲಿದೆ ಎಂದು ಮಠದ ಧರ್ಮಾಧಿಕಾರಿಗಳಾದ ಶರಣಯ್ಯ ಸ್ವಾಮಿಗಳು ತಿಳಿಸಿದ್ದಾರೆ.