ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಕಾಲಿಗೆ ಗುಂಡೇಟು
ಬೀದರ್ , ಆ 30: ಪೆÇಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ ಘಟನೆ ಇಂದು ನಸುಕಿನ ಜಾವ ಬೀದರ್‍ಜಿಲ್ಲೆ ಭಾಲ್ಕಿ ತಾಲೂಕಿನ ಕುರುಬಕೇಳಗಿ ಗ್ರಾಮದಲ್ಲಿ ನಡೆದಿದೆ.
ಕಿಡ್ನಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಸಂಗಮೇಶನ ಕಾಲಿಗೆ ಗುಂಡೇಟು ಬಿದ್ದಿದೆ.
ಈತ ಕುರುಬಕೇಳಗಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಬಳಿ ಅಡಗಿ ಕುಳಿತಿದ್ದ .ಈ ವೇಳೆ ಇಬ್ಬರು ಪೆÇಲೀಸರ ಮೇಲೆ ಮಚ್ಚಿನಿಂದ ಸಂಗಮೇಶ ದಾಳಿ ನಡೆಸಿದ್ದಾನೆ.ಕಾನ್ಸ್‍ಟೇಬಲ್ ಗುರುನಾಥ್, ಹೆಡ್‍ಕಾನ್ಸ್‍ಟೇಬಲ್ ರಾಜೇಂದ್ರ ಮೇಲೆ ಹಲ್ಲೆ ನಡೆಸಿದ್ದಾನೆ.
ಭಾಲ್ಕಿ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬ್ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆರೋಪಿ ಯನ್ನು ದಾಖಲಿಸಲಾಗಿದೆ ಎಂದು ಎಸ್‍ಪಿ ಪ್ರದೀಪ ಗುಂಟಿ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ:
ಹಣಕಾಸಿನ ವಿಚಾರಕ್ಕೆ ಹಣಮಂತಪ್ಪಾ ಹಾಗೂ ಪ್ರಕಾಶ ಸ್ವಾಮಿ ಎಂಬುವವರ ನಡುವೆ ಗಲಾಟೆ ಯಾಗಿತ್ತು.
ಹನುಮಂತಪ್ಪನ ಸುಪಾರಿ ಮೇರೆಗೆ ಪ್ರಕಾಶ ಸ್ವಾಮಿಯನ್ನು ಸಂಗಮೇಶ ಮತ್ತು ತಂಡದ 6 ಜನ ಆರೋಪಿಗಳು ಅಪಹರಣ ಮಾಡಿದ್ದರು.
6 ಜನರ ಪೈಕಿ ಮೂವರನ್ನು ಮಹಾರಾಷ್ಟ್ರದ ನಿಜಾಮಾಬಾದ್‍ನಲ್ಲಿ ಬಂಧಿಸಲಾಗಿತ್ತು.ಮುಖ್ಯ ಆರೋಪಿ ಸಂಗಮೇಶ ಹಾಗು ವಿಜಯ್, ಗುಂಡಪ್ಪಾ ಎಂಬುವವರನ್ನು ಬಂಧಿಸಿ ಬಳಿಕ ಭಾಲ್ಕಿಗೆ ಕರೆತರುವ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದರು.
ಟಾಯ್ಲೆಟ್ ಹೋಗ್ತಿನಿ ಎಂದು ಪಿಎಸ್‍ಐರನ್ನ ತಳ್ಳಿ ಸಂಗಮೇಶ ಪರಾರಿಯಾಗಿದ್ದ.
ಇಂದು ಸಂಗಮೇಶ ಕುರುಬಕೇಳಗಿ ಬಳಿ ಸಿದ್ದೇಶ್ವರ ದೇವಸ್ಥಾನದ ಬಳಿ ಅವಿತುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.