1 ರಂದು ಕಾಂತಾ,ಲಿಂಗರಾಜಪ್ಪ ಅಪ್ಪಾ, ಸೌದಿ ಅಭಿನಂದನೆ
ಕಲಬುರಗಿ, ಆ. 30: ರಾಜ್ಯ ಸರಕಾರದ ಡಿ.ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಮಾಜಿ ಸಚಿವ ಎಸ್.ಕೆ ಕಾಂತಾ, ಸಾಮಾಜಿಕ ಸೇವೆ ಸೇರಿದಂತೆ ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ ಮತ್ತು ರಾಮನಾಥ ಗೋಯೆಂಕಾ ಎಕ್ಸಲೆನ್ಸ ಇನ್ ಜರ್ನಾಲಿಸಂ ಪ್ರಶಸ್ತಿ ಪಡೆದ ಯಾದಗಿರಿ ಜಿಲ್ಲೆಯ ಕನ್ನಡಪ್ರಭ ಪತ್ರಿಕೆಯ ಪ್ರಧಾನ ವರದಿಗಾರ ಆನಂದ ಎಂ ಸೌದಿ ಅವರಿಗೆ ಕಲಬುರಗಿಯ ಸಮಾನ ಮನಸ್ಕರ ಸಂಘಟನೆಗಳ ಒಕ್ಕೂಟದಿಂದ ಅಭಿನಂದನಾ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಸೆ.1 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಸಾನಿಧ್ಯವನ್ನು ಪಾಳಾದ ಗುರುಮೂರ್ತಿ ಶಿವಾಚಾರ್ಯರು ವಹಿಸಲಿದ್ದು, ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಕ್ರಮ ಸಿದ್ದಾರಡ್ಡಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಲ್ಲಿನಾಥ ಪಾಟೀಲ ಕಾಳಗಿ, ಆನಂದ ದಂಡೋತಿ ಆನಂದ ಪಾಟೀಲ ಸರಡಗಿ ಆಗಮಿಸಲಿದ್ದಾರೆ ಎಂದು ಒಕ್ಕೂಟದ ಮುಖಂಡರಾದ ಎಂ ಎಸ್ ಪಾಟೀಲ ನರಿಬೋಳ, ಮಲ್ಲಿಕಾರ್ಜುನ್ ಸಾರವಾಡ, ದಯಾನಂದ ಪಾಟೀಲ, ಸಿದ್ರಾಮಯ್ಯ ಹಿರೇಮಠ, ಪ್ರಶಾಂತ ಗುಡ್ಡಾ, ರವಿ ಮದನಕರ್, ಲಕ್ಮೀಕಾಂತ ಸ್ವಾದಿ, ಮಾಲಾ ದಣ್ಣೂರ, ಮೃತ್ಯುಂಜಯ ಪಲ್ಲಾಪೂರಮಠ,
ಶ್ರವಣಕುಮಾರ ನಾಯಕ,ದತ್ತು ಪಾಟೀಲ ಗೌಡಗಾಂವ್, ಕಮಲಾಕರ್ ಧನ್ನಿ ಸಂದೀಪ ಭರಣಿ, ಶರಣು ಸುಬೇದಾರ, ಆನಂದ ಹಿರೇಮಠ ಜಂಟಿಯಾಗಿ ತಿಳಿಸಿದ್ದಾರೆ