ಸರಕಾರಿ ಪದವಿ ಕಾಲೇಜು ಭೂಮಿ ಪರಭಾರೆಗೆ ವಿರೋಧ
ಕಲಬುರಗಿ,ಆ 30: ನಗರದ ಸರಕಾರಿ ಪದವಿ ಮಹಾ ವಿದ್ಯಾಲಯ ( ಸ್ವಾಯತ್ತ) ಕ್ಕೆ ಸೇರಿದ ಭೂಮಿಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೀಡಬೇಕೆಂದು ನಿರ್ಧರಿಸುವ ಸಚಿವ ಸಂಪುಟದ ನಿರ್ಧಾರ ಖಂಡಿಸಿ ಸರಕಾರಿ ಪದವಿ ಮಹಾವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮತ್ತು ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ತುಳಜಾರಾಮ ಎನ್.ಕೆ ಮಾತನಾಡಿ,ಪದವಿ ಕಾಲೇಜಿಗೆ ಸೇರಿದ 3 ಎಕರೆ 7 ಗುಂಟೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ನೀಡಲು ನಿರ್ಧರಿಸುವದು ಅತ್ಯಂತ ಆಘಾತಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವೆಂಕಟೇಶ ದೇವದುರ್ಗ,ರಾಹುಲ್ ಜಾಧವ,ಪ್ರೀತಿ ದೊಡ್ಡಮನಿ,ನಾಗರಾಜ ರಾವೂರ,ಸಿದ್ಧಾರ್ಥ ತಿಪ್ಪನೋರ,ಬಾಬು,ಅಜಯ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡರು.