ಮಹಿಳೆ ಮೇಲೆ ಕಾಡುಹಂದಿ ದಾಳಿ:ಚಿಕಿತ್ಸಾ ವೆಚ್ಚ ಭರಿಸಲು ಆಗ್ರಹ
ಚಿಂಚೋಳಿ,ಆ.30: ಚಿಂಚೋಳಿ ತಾಲ್ಲೂಕಿನ ಬೈರಂಪಳ್ಳಿ ತಾಂಡಾದಲ್ಲಿ 50 ವರ್ಷದ ಸೋನಾಬಾಯಿ ಎನ್ನುವ ರೈತ ಮಹಿಳೆಯ ಮೇಲೆ ಕಾಡು ಹಂದಿ ದಾಳಿ ಮಾಡಿದ ಪರಿಣಾಮ ತೀವ್ರ ಗಾಯಕ್ಕೆ ಕಾರಣವಾಗಿದ್ದು, ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚಿಂಚೋಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ತಿಳಿದು ಚಿಂಚೋಳಿಯ ಯುವ ಕರ್ನಾಟಕ ವೇದಿಕೆ ಅಧ್ಯಕ್ಷ ಸಚಿನ ಚವ್ಹಾಣ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಭೇಟಿ ಮಾಡಿದರು. ಬಳಿಕ ಈ ದಾಳಿಗೆ ಒಳಗಾದ ಮಹಿಳೆಗೆ ಸೂಕ್ತ ಪರಿಹಾರ ಮತ್ತು ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ತಾಲ್ಲೂಕು ಅರಣ್ಯ ಇಲಾಖೆಯೇ ಭರಿಸಬೇಕು ಎಂದು ಯುವ ಕರ್ನಾಟಕ ವೇದಿಕೆ ಅಧ್ಯಕ್ಷ ಸಚಿನ್ ಚವ್ಹಾಣ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಕರ್ನಾಟಕ ಪದಾಧಿಕಾರಿಗಳಾದ ಹೀರಾ ಪವಾರ್, ಗುರುನಾಥ ರಾಠೋಡ, ಸುನೀಲ್ ಪವಾರ್, ವಿಕ್ರಮ್ ಚೌವ್ಹಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.