ಕೃಷಿ ಪಂಪ್ ಸೆಟಗಳಿಗೆ ಆಧಾರ್ ಜೋಡಣೆ ವಿರೋಧಿಸಿ 4ರಂದು ಪ್ರತಿಭಟನೆ
ಇಂಡಿ :ಆ.30: ರೈತರ ಕಷ್ಟಕ್ಕೆ ಯಾವುದೆ ರಾಜಕೀಯ ಪಕ್ಷಗಳು ಇಲ್ಲ ಕರ್ಪುರೇಟರ್ ಕಂಪನಿಗಳ ಪರ ಕೆಲಸ ಮಾಡುತ್ತಿದ್ದಾರೆ. ಕೃಷಿ ವಲಯಕ್ಕೆ ಕಿಂಚಿತ್ತೂ ಲಾಭವಗಬಾರದೆಂದು ನೆಡೆಸುತ್ತಿರುವ ಪ್ರಯತ್ನ್ 77ವರ್ಷ್ ದಿಂದಲೂ ನೆಡೆದು ಬಂದಾಗಿದೆ. ರೈತನು ಕೃಷಿಯಿಂದ ವರಮಾನ ಇಲ್ಲದೆ ಸತ್ತು ಸತ್ತು ಬದುಕುತ್ತಿದ್ದಾನೆ. ಡಾ, ಸ್ವಾಮೀನಾಥ್ ವರದಿಯಂತೆ ಸಿ 2+50ಆಧಾರದಲ್ಲಿ ರೈತನಿಗೆ ಕನಿಷ್ಠ ಬೆಲೆ ನಿಗದಿ ಮಾಡಿ ಎಂದು ಭಾರತ ಸರಕಾರಕ್ಕೆ ವರದಿ ನೀಡಿ 23ವರ್ಷಗಳು ಕಳೆದಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಎಸ್ ಬಿ ಕೆಂಬೋಗಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಸನ್ 2000 ದಲ್ಲಿ ಕಾಂಗ್ರೆಸ್ ಸರಕಾರದ ಶ್ರೀ ಎಸ್ ಎಂ ಕೃಷ್ಣರವರು ಮುಖ್ಯ ಮಂತ್ರಿ ಇದ್ದಾಗ ಕೆ ಇ ಬಿ ಯನ್ನು ಖಾಸಗಿ ಕರಣಕ್ಕೆ ವರ್ಗಯಿಸಿತು. ಆಗ 2001ರಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆ ಮಾಡಿದ ಪರಿಣಾಮ ಖಾಸಗಿ ವ್ಯಕ್ತಿ ಕೈ ಸೇರಬೇಕಾದ ವಿದ್ಯುತ್ ಕಂಪನಿ ಐದು ಭಾಗವಾಗಿ ಸರಕಾರದಲ್ಲೇ ಉಳಿದಿದೆ. ಮತ್ತೆ ಈಗ ಕೃಷಿ ಪಂಪ್ ಸಟ್ ಗಳಿಗೆ ಆಧಾರ್ ಲಿಂಕ್ ಮಾಡಿ ಅನ್ ಲೈನ್ ಮೂಲಕ ವ್ಯೆವಹಾರ ನಡೆಸು ಸಂಚು ನಡೆದಿದೆ ಇದನ್ನು ಸರಕಾರ ಆದೇಶ ಹಿಂಪಡೆಯಬೇಕು ಎಂದು ಅವರು ಹೇಳಿದರು. ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಆದೇಶದ ಮೆರೆಗೆ ಸಪ್ಟೆಂಬರ್ 4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಉಪ ಸ್ಥಿತರಾದ ಹಣಮಂತ ಗುಡ್ಲ, ಜೇಟ್ಟೆಪ್ಪ ಪೂಜಾರಿ, ಭೀರಪ್ಪ ಪೂಜಾರಿ, ರಫೀಕ್ ಚೌಧರಿ. ಸೇರಿದಂತೆ ಹಲವರು ಇದ್ದರು.