ರಾಷ್ಟ್ರೀಯ ಕ್ರೀಡಾ ದಿನ ಆಚರಣೆ
ಕೊಲ್ಹಾರ:ಆ.30: ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಾಕಿ ಮಾಂತ್ರಿಕ ಮೇಜರ್ ದ್ಯಾನಚಂದ ಜನ್ಮದಿನವಾದ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.
ಮೇಜರ್ ದ್ಯಾನಚಂದರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಈಚೆಗೆ ಜರುಗಿದ ಕೊಲ್ಹಾರ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ,ಪಾರಿತೋಷಕಗಳನ್ನು ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರು ವಿತರಿಸಿದರು.
ನಂತರ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಮಾತನಾಡಿ, ಕ್ರೀಡೆಯಿಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಠದ ಜೊತೆ ಜೊತೆಗೆ ಆಟಕ್ಕೆ ಹೆಚ್ಚು ಮಹತ್ವವನ್ನು ಕೊಡಬೇಕು.
ಆಟದಿಂದ ಆರೋಗ್ಯ ,ಆರೋಗ್ಯದಿಂದ ಅಭ್ಯಾಸ ಉತ್ತಮವಾಗಿ ಆಗುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖಗಳು ಎಷ್ಟು ಅವಶ್ಯವೋ,ಅಷ್ಟೇ ಶಿಕ್ಷಣಕ್ಕೆ ಆಟ-ಪಾಠಗಳೆರಡು ಮುಖ್ಯ.ದ್ಯಾನಚಂದರವರ ಜೀವನ ಹಾಗೂ ಸಾಧನೆಗಳನ್ನು ಮಕ್ಕಳಿಗೆ ಮಾರ್ಮಿಕವಾಗಿ ತಿಳಿಸಿದರು.
ಈ ವೇಳೆ ಮುಖ್ಯ ಶಿಕ್ಷಕ ಯಲ್ಲಪ್ಪ ಶಿರೋಳ,ಶಿಕ್ಷಕರಾದ ಗಿರೀಶ ಕುಲಕರ್ಣಿ,ಬಲವಂತ ಹಿಕ್ಕನಗುತ್ತಿ,ಸುರೇಶ ಉತ್ನಾಳ,ಬಸವರಾಜ ತುಪ್ಪದ, ಮಂಜುನಾಥ ಮುಳವಾಡ, ಪ್ರಕಾಶ ನಾಯಕ ,ಶಿಕ್ಷಕಿಯರಾದ ಶ್ರೀದೇವಿ ಬಿರಾದಾರ,ಸಿ.ಎಚ್.ಗೌಡರ,ವೈಷ್ಣವಿ ಮಠಪತಿ,ಧನಶ್ರೀ ಬಾರಸ್ಕಳ,ಪ್ರಿಯಾ ಕಾಖಂಡಕಿ,ಶೈಲಾ ಬಿರಾದಾರ,ಶೃತಿ ಬೀಳಗಿ,ಗೀತಾ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು