ಶಾಂತಿಕೇತನ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ
ವಿಜಯಪುರ,ಆ.30:ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುವಂತೆ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮುಖಾಂತರ ಸರ್ವಾಂಗೀಣ ಪ್ರಗತಿಯನ್ನು ಸಾಧಿಸಬೇಕು ಎಂದು ಶಾಂತಿನಿಕೇತನ ಅಂತರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ರಿಜೇಶ ಪಿ.ಎನ್. ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಗರದ ಶಾಂತಿನಿಕೇತನ ಅಂತರಾಷ್ಟ್ರೀಯ ಸಿ.ಬಿ.ಎಸ್.ಇ. ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕ್ರೀಡೆಯ ಸಂಪ್ರದಾಯವನ್ನು ಆಚರಿಸಲು ಮತ್ತು ಭಾರತೀಯ ಕ್ರೀಡೆಗಳ ದಿಗಜ್ಜರಿಗೆ ಗೌರವ ಸಲ್ಲಿಸಲು ಆ.29ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಅನಿಲಕುಮಾರ ತಳೇವಾಡ ಹಾಗೂ ಆನಂದ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕ್ರೀಡಾ ಚಟುವಟಿಕೆಗಳು ನಡೆದವು.
ಶಾಂತಿನಿಕೇತನ ಅಂತರಾಷ್ಟ್ರೀಯ ಶಾಲೆ ಸಿ.ಬಿ.ಎಸ್.ಇ.ಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಾಲೆಯ ಶೈಕ್ಷಣಿಕ ಕಾರ್ಯ ಸಂಯೋಜಕಿ ಕಮರ್ ಪಾರಾಖಾಜಿ ಉಪಸ್ಥಿರಿದ್ದರು.