ರಾಷ್ಟ್ರೀಯ ಕ್ರೀಡಾ ದಿನಾಚರಣೆ
ವಿಜಯಪುರ,ಆ.30:ನಗರದ ಶಾಂತಿನಿಕೇತನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ದೇಶಪ್ರೇಮಿ ಕ್ರೀಡಾ ಸಾಧಕ ಮೇಜರ್ ಧ್ಯಾನಚಂದ ಅವರ ಹುಟ್ಟುಹಬ್ಬದ ಪ್ರತೀಕವಾದ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಯಿತು.
ದೈಹಿಕ ಶಿಕ್ಷಕÀ ಎ.ಎಚ್. ಸಗರ ಅವರು ಧ್ಯಾನಚಂದರವರ ಭಾವಚಿತ್ರಕ್ಕೆ ಹೂ ಹಾರ ಹಾಕಿ ಪೂಜೆ ಸಲ್ಲಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಆಸಕ್ತಿಯನ್ನು ಬೆಳೆಸಿಕೊಂಡು ಸದೃಢರಾಗಬೇಕು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಕೊಂಡರೆ ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ ಎಂದು ನುಡಿದರು.
ಪ್ರಾಚಾರ್ಯ ಶ್ರೀಧರ ಕುರಬೇಟ ಶುಭಾಶಯ ಕೋರಿದರು. ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಕಿರಣ ರಾಠೋಡ ಇತರರು ಉಪಸ್ಥಿತರಿದ್ದರು.