ದೇಶದ ಸ್ವಾತಂತ್ರ್ಯದ ಇತಿಹಾಸ ಅತಿ ಮುಖ್ಯ:ಲಕ್ಷ್ಮಣ
ಸೈದಾಪುರ:ಆ.30:ಶಿಕ್ಷಕರಾಗುವ ನಿಮಗೆ ದೇಶದ ಸ್ವಾತಂತ್ರ್ಯದ ಇತಿಹಾಸ ಅತಿ ಮುಖ್ಯವಾಗಿದ್ದೂ ಇದು ಸದೃಢ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ನೆರವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಅಜೀಂ ಪ್ರೇಮಜಿ ಫೌಂಡೇಶನ ವತಿಯಿಂದ ಸ್ವಾತಂತ್ರ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಸ್ವಾತಂತ್ರ್ಯ ಹೋರಾಟದಲ್ಲಿ ಸಂವಿಧಾನಿಕ ಅಂಶಗಳು ಪ್ರಸ್ತುತಕ್ಕೆ ಎಷ್ಟೊಂದು ಸಮಂಜಸ ವಿಷಯ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹೋರಾಟದ ಮಾರ್ಗಗಳು ಬೇರೆಯಾಗಿದ್ದರೂ ಗುರಿ ಒಂದೆ ಆಗಿತ್ತು. ನಾವು ಕಲಿಯುವ ಕಲಿಸುವ ವಿಧಾನ ಬೇರೆಯಾಗಿದ್ದರೂ ಗುರಿ ಮಾತ್ರ ಒಂದೆಯಾಗಿರುತ್ತದೆ. ಸಂವಿಧಾನ ಹಾಗೂ ದೇಶದ ಇತಿಹಾಸದ ಬಗಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪ್ರಪಂಚದ ಉತ್ತಮ ಸಂವಿಧಾನ ನಮ್ಮದಾಗಿದ್ದೂ ಎಲ್ಲವನ್ನು ಅದರಲ್ಲಿ ತಿಳಿಸಲಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಪ್ರತಿಯೊಬ್ಬರ ಉತ್ತಮ ಜೀವನಕ್ಕೆ ಇದರ ಮಹತ್ವ ಅತಿ ಹೆಚ್ಚಿನದಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಮಾತನಾಡಿ, ಅಜೀಂ ಪ್ರೇಮಿಜಿ ಫೌಂಡೇಶನ ಶೈಕ್ಷಣಿಕ ಅಭಿವೃದ್ದಿಯಲ್ಲಿ ತನ್ನೆಯಾದ ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಇದು ಒಳಗೊಂಡು ನೂತನ ಬೋಧನಾ ಕಲಿಕಾ ಮಾರ್ಗಗಳನ್ನು ತಿಳಿಸುತ್ತಿದೆ. ನಮ್ಮ ಸಂಸ್ಥೆಯಲ್ಲಿ ಈ ವಿದಧ ಕಾರ್ಯಕ್ರಮ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದ್ದೂ ಇದರ ಸರಿಯಾದ ಸದುಪಯೋಗ ಪ್ರಶಿಕ್ಷಣಾರ್ಥಿಗಳು ಪಡೆದುಕೊಳ್ಳುವಂತೆ ಕಿವಿ ಮಾತುಗಳನ್ನು ಹೇಳಿದರು.
ಮುಂದಿನ ದಿನಗಳಲ್ಲಿ ಡಿ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಪ್ರಾಥಮಿಕ ಶಿಕ್ಷಣ ಮಗುವಿನ ಕಲಿಕೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತಿದ್ದೂ ಈ ದಿಸೆಯಲ್ಲಿ ಶಾಲೆಗಳು ಹೆಚ್ಚಾಗಲಿವೆ. ಉದ್ಯೋಗ ಸೇರಿದಂತೆ ಹೆಚ್ಚಿನ ಅವಕಾಶಗಳಿರುವುದರಿಂದ ಪರಿಶ್ರಮದೊಂದಿಗೆ ಅಭ್ಯಾಸ ಮಾಡಬೇಕು. ಪ್ರಮಾಣ ಪತ್ರದ ಶಿಕ್ಷಕರು ನೀವಾಗದೆ ಉತ್ತಮ ಆದರ್ಶ ಶಿಕ್ಷಕರಾಗಬೇಕು.
ಲಕ್ಷ್ಮಣ ಪಾಟೀಲ ಸಂಪನ್ಮೂಲ ವ್ಯಕ್ತಿ