ಸೇವೆಯಲ್ಲಿ ಕರ್ತವ್ಯ ನಿಷ್ಠೆ ಹೊಂದಬೇಕು:ಉಪನ್ಯಾಸಕ ಆರ್.ಆರ್.ಬಗಲಿ
ಇಂಡಿ:ಆ.30:ಒಳ್ಳೆಯ ಮನುಷ್ಯನಾಗಲು ತಿಳುವಳಿಕೆ ಮುಖ್ಯ.ತಿಳುವಳಿಕೆಯುಳ್ಳವನು ಜಾಗೃತನಾಗಿರುತ್ತಾನೆ. ಅರಿವು ಹೊಂದಿರುತ್ತಾನೆ.ಅರಿವಿನ ಕೀಲಿಕೈ ವಿಸ್ತಾರವಾದ ಓದು.ಆದ್ದರಿಂದ ಗ್ರಂಥಾಲಯವನ್ನು ಉಪಯೋಗಿಸಲು ಮರೆಯದಿರಿ.ಇಲ್ಲಿನ ಕಾಲೇಜಿನ ಒಳ್ಳೆಯ ವಾತಾವರಣವನ್ನು ಇಲ್ಲಿಯ ಸೇವಾ ದಿನಗಳನ್ನು ಉಪನ್ಯಾಸಕರ ಪ್ರೀತಿ,ವಿಶ್ವಾಸದ ಒಡನಾಟವನ್ನು ಹಾಗೂ ವಿದ್ಯಾರ್ಥಿಗಳ ಮುಗ್ಧತೆಯನ್ನು ಸ್ಮರಿಸುವಂತದ್ದು ಎಂದು ವರ್ಗಾವಣೆಗೊಂಡು ಸನ್ಮಾನ ಸ್ವೀಕರಿಸಿ ನಿರ್ಗಮಿಸುತ್ತಿರುವ ಉಪನ್ಯಾಸ ಆರ್.ಆರ್.ಬಗಲಿ ಹೇಳಿದರು.
ಅವರು ನಗರದ ಸರ್ಕಾರಿ ಪಿಯು ಕಾಲೇಜಿನಿಂದ ವರ್ಗಾವಣೆಗೊಂಡ ನಿಮಿತ್ಯಕಾಲೇಜಿನ ವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಲ್ಲಿಂದಲೋ ಬಂದು ಇಲ್ಲಿ ಅಂಗಳದಲ್ಲಿ ತಾವರೆ ಹೂವೊಂದು ಅರಳಿತಲ್ಲ ಎಂಬ ಅರ್ಥಗರ್ಭಿತ ಬಿಳ್ಕೊಡುಗೆಯ ಹಾಡು ನೆನಪಿಸುತ್ತಿದೆ.ಈ ಘಳಿಗೆ ಅವಿಸ್ಮರಣಿಯ.ಅವರ್ಣನೀಯ.ಹಲವು ವರ್ಷಗಳ ಬಾಂಧವ್ಯದ ಕೊಂಡಿ ಅಗಲಿಕೆಯ ಈ ಕ್ಷಣ ಅನಿವಾರ್ಯ. ಸರ್ಕಾರಿ ನೌಕರ,ಶಿಕ್ಷಕ,ಉಪನ್ಯಾಸಕರು ವರ್ಗಾವಣೆ ಹೊಂದುವುದು ಸಹಜ.ಇರುವ ದಿನದಲ್ಲಿ ನೀಡಿದ ಸೇವೆ ಸ್ಮರಿಸುವಂತದ್ದಾಗಿರಬೇಕು ಎಂದು ಹೇಳಿದರು. ವರ್ಗಾವಣೆಗೊಂಡಿರುವ ಇನ್ನೊರ್ವ ಉಪನ್ಯಾಸಕ ವಿ.ವಿ.ಬಮಗೊಂಡ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಎನ್.ಎಸ್.ತೆಗ್ಗೆಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕರಾದ ಸಕೀನಾ ಪಾಟೀಲ, ಆರ್.ಡಿ.ಬಿರಾದಾರ, ಕೆ.ವಿ.ಸರಸಂಬಿ, ಪ್ರದೀಪ ನಾಗಠಾಣ, ಆರ್.ಬಿ.ದ್ಯಾಮಗೊಂಡ,ಎಚ್.ಎಸ್.ಗೊಟ್ಯಾಳ, ಸಿ.ಎಸ್.ಹಿರೇಮಠ, ಬಸವರಾಜ ತಳವಾರ,ಎಸ್.ಎ.ಜಹಾಗಿರದಾರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.