ಡಾ.ಎಂ.ಎಂ.ಕಲಬುರ್ಗಿ ಕೊಡುಗೆ ಅವಿಸ್ಮರಣೀಯ
ಕಲಬುರಗಿ:ಆ.30:ಡಾ.ಎಂ.ಎಂ.ಕಲಬುರ್ಗಿಅವರು ಈ ನಾಡುಕಂಡ ಶ್ರೇಷ್ಟಚಿಂತಕರಲ್ಲಿ ಪ್ರಮುಖರಾಗಿದ್ದಾರೆ. ಅವರುತಮಗೆ ಹೇಳಬೇಕೆನಿಸಿದ ವಿಷಯವನ್ನುಯಾವುದೇ ಮುಲಾಜಿಲ್ಲದೇ ಹೇಳುವ ಎದೆಗಾರಿಕೆ ಹೊಂದಿದ್ದರು. ತಮ್ಮಇಡೀಜೀವನದುದ್ದಕ್ಕೂ ಸತ್ಯಕ್ಕಾಗಿ, ಮೌಢ್ಯತೆ,ಅಂಧಶೃದ್ಧೆ,ಕಂದಾಚಾರದಂತಹ ಅನಿಷ್ಟಗಳ ವಿರುದ್ದ ಹೋರಾಡುವ ಮೂಲಕ, ವೈಚಾರಿಕತೆಯ ಪ್ರಖರಜ್ಯೋತಿಯಾಗಿ, ನಾಡು, ನುಡಿ, ಸಂಸ್ಕøತಿ, ಶರಣ ಸಾಹಿತ್ಯಕ್ಕೆ ಅವಿಸ್ಮರಣೀಯವಾದಕೊಡುಗೆಯನ್ನು ನೀಡಿದ್ದಾರೆಂದುಉಪನ್ಯಾಸಕ, ಶರಣಚಿಂತಕಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದಎಸ್.ಬಿ.ಕಾಲೇಜಿನಎದುರುಗಡೆಯಿರುವ ‘ಕೊಹಿನೂರಕಂಪೂಟರತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಶುಕ್ರವಾರಜರುಗಿದ’ಡಾ.ಎಂ.ಎಂ.ಕಲಬುರ್ಗಿಅವರ 9ನೇ ಲಿಂಗೈಕ್ಯ ಸಂಸ್ಮರಣಾ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆಗೌರವ ಸಲ್ಲಿಸಿ ಮಾತನಾಡುತ್ತಿದ್ದರು.
ಡಾ.ಕಲಬುರ್ಗಿಅವರುಅಧ್ಯಾಪಕರಾಗಿ, ಕುಲಪತಿಗಳಾಗಿ, ಸಂಶೋಧಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದಾರೆ. 20ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ವೈಜ್ಞಾನಿಕ ಸಂಶೋಧನೆ, ಸಂಪಾದನೆಗೆ ಹೆಸರಾದವರು. ಸದಾ ಕ್ರೀಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದರು. ಎಲ್ಲರಿಗೂಒಗ್ಗದ ಸಂಶೋಧನೆಯನ್ನು ಕಲಬುರ್ಗಿಯವರು ಒಗ್ಗಿಸಿಕೊಂಡಿರುವದೇ ಅವರ ವಿಶೇಷತೆಯಾಗಿದೆಎಂದರು.
ಸಂಸ್ಥೆಯಅಧ್ಯಕ್ಷಡಾ.ಸತೀಶ್ ಟಿ.ಸಣಮನಿ ಮಾತನಾಡಿ, ಸದಾ ಸಮಾಜದ ಒಳತಿಗಾಗಿ ಹೋರಾಡುತಿದ್ದಡಾ.ಕಲಬುರ್ಗಿಅವರ ಹತ್ಯೆ ವೈಚಾರಿಕತೆ, ಸತ್ಯದ, ಪ್ರಗತಿಪರಚಿಂತನೆಯೆಕೊಲೆಯಾಗಿದ್ದು, ಖಂಡನೀಯವಾದ ಸಂಗತಿಯಾಗಿದೆಎಂದರು.
ಕಾರ್ಯಕ್ರಮದಲ್ಲಿಸಂಸ್ಥೆಯಕಾರ್ಯದರ್ಶಿ ಭೀಮಾಶಂಕರಎಸ್.ಘತ್ತರಗಿ, ಕಸಾಪ ಉತ್ತರ ವಲಯಗೌರವಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ,ಪ್ರಮುಖರಾದ ಅಶ್ವಿನಿ ಜಿ.ಪಾಟೀಲ, ಅರ್ಚನಾ ಎಂ.ಹೀರಾಪೂರ್, ರೂಪಾ, ವಿಶಾಲ್, ಅಂಬಿಕಾ,ಐಶ್ವರ್ಯ ಹಾಗೂ ವಿದ್ಯಾರ್ಥಿಗಳಿದ್ದರು.