ಭಕ್ತರ ಸಹಕಾರದಿಂದ ಜಾತ್ರೆ ಅದ್ಧೂರಿಯಾಗಿ ನಡೆದಿದೆ; ಸಂಕನೂರ್
ಚಿತ್ತಾಪುರ;ಆ.30: ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಆ.19ರಂದು ಶ್ರಾವಣ ಮಾಸದ ನಡುವಿನ ಸೋಮವಾರದಂದು ನಡೆದ ಬಸವಣ್ಣನವರ ಜಾತ್ರೆಯು ಸಾರ್ವಜನಿಕರ ಹಾಗೂ ಭಕ್ತರ ಸಹಕಾರದಿಂದ ಅದ್ಧೂರಿಯಾಗಿ ಜರುಗಿದೆ ಎಂದು ಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ್ ಹೇಳಿದರು.
ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮಸ್ಥರ ಸಹಕಾರ, ಪೆÇಲೀಸರ ಸೂಕ್ತ ಬಂದೋಬಸ್ತ್, ಎನ್.ಈ.ಕೆ.ಆರ್.ಟಿ.ಸಿ, ವಾಹನ ಸವಾರರ ಸಹಕಾರದಿಂದ ರಾಜ್ಯ, ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪ್ರತಿ ವರ್ಷಕ್ಕಿಂತಲೂ ಈ ವರ್ಷ ಜಾತ್ರೆಯು ಅದ್ದೂರಿಯಾಗಿ ನಡೆದಿದೆ ಎಂದರು.
ಈ ಭಾರಿ ನಡೆದ ಜಾತ್ರೆಯಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಭಕ್ತರು ಜಾತ್ರೆಗೆ ಆಗಮಿಸಿ ಬಸವಣ್ಣನವರ ಆಶಿರ್ವಾದ ಪಡೆದುಕೊಂಡಿದ್ದಾರೆ. ಪೆÇಲೀಸ್ ಇಲಾಖೆಯವರು ಸಹ ಭಕ್ತರಿಗೆ ಕಟ್ಟು ನಿಟ್ಟಾಗಿ ಸರದಿ ಸಾಲಿನಲ್ಲಿ ಹೋಗಲು ಅನುಕೂಲ ಮಾಡಿಕೊಟ್ಟಿದ್ದು ಶ್ಲಾಘನೀಯ ಎಂದು ಬಣ್ಣಿಸಿದರು.
ಟ್ರಸ್ಟ್’ನ ಉಪಾಧ್ಯಕ್ಷ ಬಿ.ಜಿ ಪಾಟೀಲ್ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಮೂರು ಕೋಟಿ ರೂ. ಖರ್ಚಾಗಿದೆ. ಇನ್ನೂ ಸ್ವಲ್ಪ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಚುರುಕಾಗಿ ನಡೆಯಲಿದೆ ಎಂದರು.
ಟ್ರಸ್ಟ್’ನ ಕಾರ್ಯದರ್ಶಿ ಚಂದ್ರಶೇಖರ ಆವಂಟಿ, ಸದಸ್ಯ ಭೀಮಣ್ಣ ಸಾಲಿ ಮಾತನಾಡಿ, ದಂಡಗುಂಡ ಗ್ರಾಮದ ಬಸವಣ್ಣನವರ ಜಾತ್ರೆಯಲ್ಲಿ ಗ್ರಾಮಸ್ಥರು ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿ ಜಾತ್ರೆಯನ್ನು ಯಶಸ್ವಿಯನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಟ್ರಸ್ಟ್’ನವರು ಗ್ರಾಮಸ್ಥರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಪ್ರೇಕ್ಷಣಿಯ ಸ್ಥಳವನ್ನಾಗಿ ಮಾಡುತ್ತೇವೆ ಎಂದರು.
ಬಸವಣ್ಣನವರ ದೇವಸ್ಥಾನದ ನಿರ್ಮಾಣ ಕಾಮಗಾರಿ ಭಕ್ತರ ಹಣದಿಂದ ನಡೆಯುತ್ತಿದೆ. ಟ್ರಸ್ಟ್’ನವರು ಇಲ್ಲಿಯವರೆಗೆ ಯಾರ ಹತ್ತಿರ ಕೂಡ ಚಂದಾ ಪಟ್ಟಿ ಎತ್ತಿಲ್ಲ. ಸುಖಾ ಸುಮ್ಮನೇ ಆಗದೇ ಇರುವ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಾ ಇದ್ದಾರೆ ಎಂದರು.
ಟ್ರಸ್ಟ್’ನವರು ಬಸವಣ್ಣನವರ ದೆವಸ್ಥಾನವನ್ನು ಅಭಿವೃದ್ಧಿ ಪಡಿಸುತ್ತಿರುವುದು ಕೆಲವರಿಗೆ ಆಗಿ ಬರುತ್ತಿಲ್ಲ. ಹೀಗಾಗಿ ಟ್ರಸ್ಟ್’ನವರಿಗೆ ಹಾಗೂ ಗ್ರಾಮದ ಕೆಲವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇಗೀನ ಕಾಲದಲ್ಲಿ ಯಾರೂ ಯಾರಿಗೂ ಬೆದರುವ ಅವಶ್ಯ ಇಲ್ಲ. ನಮ್ಮದೇನಿದ್ದರೂ ದೇವಸ್ಥಾನ ಕಟ್ಟುವುದು, ಅಭಿವೃದ್ಧಿ ಪಡಿಸುವುದೇ ನಮ್ಮ ಗುರಿಯಾಗಿದೆ ಎಂದರು.
ಮುಖಂಡರಾದ ಬಸವರಾಜ ಇಟಗಿ, ಭೀಮರಾಯ ಗೌಡ ಚಾಮನೂರ, ರಾಜಶೇಖರ ಪಾಟೀಲ್, ಭಿಮಣ್ಣ ದಂಡಗುಂಡ, ಹಣಮಂತ ದೊಡ್ಡಮನಿ, ಶರಣಪ್ಪ, ಮಲ್ಲು ಹಳಬಾ, ಬಸಪ್ಪ ದೊಡಮನಿ, ಬಸಣ್ಣ, ಗಂಗಪ್ಪ ಆಡಕಾಯಿ ಸೇರಿದಂತೆ ಇತರರು ಇದ್ದರು.