ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ: ಶಾಸಕ ಬೆಲ್ದಾಳೆ
ಚಿಟಗುಪ್ಪ:ಆ.30: ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ಸರ್ಕಾರಿ ಶಾಲೆ ಕಟ್ಟಡ, ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಮೂಲ ಸೌಕರ್ಯ ಒದಗಿಸಿಕೊಡುವುದು ನನ್ನ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲೂಕಿನ ವಿಠಲಪುರ್, ಚಾಂಗಲೇರಾ, ಕರಕನಳ್ಳಿ ಗ್ರಾಮಗಳಲ್ಲಿ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಶಾಲೆ ಕಟ್ಟಡ, ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಚಾಲನೆ ನೀಡಿದರು. ವಿಠಲಪುರ್ ಗ್ರಾಮದಲ್ಲಿ ಪೂರ್ಣಗೊಂಡ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮೆಲ್ಲರ ಆಶೀರ್ವಾದಿಂದ ನಾನು ಶಾಸಕನಾಗಿ ಆಯ್ಕೆ ಆಗಿದ್ದೇನೆ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಕ್ಷೇತ್ರದಲ್ಲಿ 6 ಬಸ್ ನಿಲ್ದಾಣ ನಿರ್ಮಾಣ ಮಾಡುತ್ತಿದೆನೆ , ಮಹಿಳೆಯರಿಗೆ ವಿಶೇಷ ಶೌಚಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ವಿಠಲಪುರ್ ಗ್ರಾಮಕ್ಕೆ ಗ್ರಾಮಡಳಿತ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬರುತ್ತಿಲ್ಲಾ ಹಲವಾರು ಬಾರಿ ಹೇಳಿದರು ಕೂಡ ಯಾವುದೇ ಪ್ರಾಯೋಜನೆ ಆಗುತ್ತಿಲ್ಲಾ ಎಂದು ಗ್ರಾಮಸ್ಥರು ಶಾಸಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಸುಣಗಾರ, ಉಡಮನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ವಿ.ಪಾಟೀಲ್, ತಹಶೀಲ್ದಾರ್ ಮಂಜುನಾಥ ಪಂಚಾಳ, ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗಿರಾ ಬಗ್ದಲ್, ಮಾಣಿಕಪ್ಪ ಖಾಶೆಂಪುರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಕುಮಾರ್ ಸ್ವಾಮಿ, ತಿಪ್ಪಾರೆಡ್ಡಿ, ದಶರಥ, ಎಇಇ ಆಕಾಶ ರೆಡ್ಡಿ, ಸಚಿನ, ರಾಜರೆಡ್ಡಿ, ವಿಜಯಕುಮಾರ್ ವಾಲಿ, ವೀರಶೆಟ್ಟಿ ಪಾಟೀಲ್, ಸಂತೋಷ್ ರೆಡ್ಡಿ, ಬಸವರಾಜ ಚಿಟನ್ನಳ್ಳಿ, ಬಸವರಾಜ ಅದಲಾಪುರ್ ಹಾಗೂ ಕರಕನಳ್ಳಿ ಬಕ್ಕಾಪ್ರಭು ದೇವಸ್ಥಾನದ ಕಾರ್ಯದರ್ಶಿ ಸಂಜುರಾವ ದೇಸಾಯಿ ಸೇರಿದಂತೆ ಗ್ರಾಮಸ್ಥರು ಇದ್ದರು.