ಮಾನಸಿಕ, ದೈಹಿಕ ಬದಲಾವಣೆ ಬಗ್ಗೆ ಗಮನಹರಿಸಿ : ಸುಬ್ರಹ್ಮಣ್ಯ ಪ್ರಭು
ಔರಾದ : ಆ.30:ಹದಿಹರೆಯದವರಲ್ಲಿ ಉಂಟಾಗುವ ಮಾನಸಿಕ, ದೈಹಿಕ ಬದಲಾವಣೆಗಳು ಮತ್ತು ವೈಯಕ್ತಿಕ ಸ್ವಚ್ಛತೆ, ಕೌಟುಂಬಿಕ ಸ್ವಚ್ಛತೆ ಹಾಗೂ ಸಮುಧಾಯದ ಸ್ವಚ್ಛತೆಯ ಪ್ರಾಮುಖ್ಯತೆ ಬಗ್ಗೆ ಎಲ್ಲರು ಕಡ್ಡಾಯವಾಗಿ ಗಮನವಹಿಸಬೇಕು ಎಂದು ಬೀದರ್ ಶಾರದಾ ರೂಡ್ ಶೆಟ್ ಜಿಲ್ಲಾ ನಿರ್ದೆಶಕ ಸುಬ್ರಹ್ಮಣ್ಯ ಪ್ರಭು ಹೇಳಿದರು.
ತಾಲೂಕಿನ ಸಂತಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೀದರ್ ಫ್ಯಾಮಿಲಿ ಪ್ಲ್ಯಾನಿಂಗ ಅಸೋಸಿಯೇಷನ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ ಹದಿ ಹರೆಯದ ಯುವಕ ಯುವತಿಯರಿಗಾಗಿ ಸಮಗ್ರ ಆರೋಗ್ಯ ಶಿಕ್ಷಣ ಮಾಲಿಕೆ ಕಾರ್ಯಕ್ರಮಕ್ಕೆ ಗುರುವಾರ ಸಸಿಗೆ ನಿರೇರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಜೀವನದ ಗುರಿ, ಉದ್ದೇಶ ಮತ್ತು ಅದನ್ನು ತಲುಪುವಲ್ಲಿ ಶಿಕ್ಷಕರ ಮಾರ್ಗದರ್ಶನ, ಹದಿಹರೆಯದವರಲ್ಲಿನ ಸಂವೇಜ್ಞಾನಾತ್ಮಕ ಸಮಸ್ಯೆಗಳು ಮತ್ತು ಅವುಗಳಿಂದ ಹೊರಬರುವ ಮಾರ್ಗಗಳು, ಕಲಿಕೆ ಮತ್ತು ಗೊಂದಲ ಹಾಗೂ ಅವುಗಳ ನಿರ್ವಹಣೆಯ ಬಗ್ಗೆ ಸಂವಾದ ಮುಂತಾದ ಚಟುವಟಿಕೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಎಫ್.ಪಿ.ಎ.ಐ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದರ ಅವರು ಮಾತನಾಡಿ, ಹದಿ ಹರೆಯದ ವಯಸ್ಸು ಬಹಳಷ್ಟು ಚಂಚಲವಾಗಿರುತ್ತದೆ. ನಾವು ಯಾವ ದಿಕ್ಕು ಕಡೆ ನಮ್ಮ ಒಲವು ತೋರಿದರೇ ಆ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಹದಿ ಹರೆಯದ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಗುರುಹಿರಿಯರ ಮಾರ್ಗದರ್ಶನ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಎಫ್ ಪಿ ಎ ಐ ಆಪತ್ ಸಮಾಲೋಚಕಿ ವಿಜಯಲಕ್ಷಿ?? ಮಾತನಾಡಿ,
ಹದಿಹರೆಯದ ವಿದ್ಯಾರ್ಥಿಗಳಿಗೆ ಪ್ರಸ್ತುತ ಸನ್ನಿವೇಶದಲ್ಲಿ ತಂದೆ-ತಾಯಿಗಳ ಮತ್ತು ಶಿಕ್ಷಕರ ಸರಿಯಾದ ಮಾರ್ಗದರ್ಶನ ಅತ್ಯಗತ್ಯವಾಗಿರುತ್ತದೆ. ತೀವ್ರ ದೈಹಿಕ ಬೆಳವಣಿಗೆ ಮತ್ತು ಅಭಿವೃದ್ಧಿ
ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಪ್ರಬುದ್ಧತೆ, ಲೈಂಗಿಕ ಪ್ರಬುದ್ಧತೆ ಮತ್ತು ಲೈಂಗಿಕ ಚಟುವಟಿಕೆ, ಪ್ರಯೋಗಶೀಲತೆ, ಮಾನಸಿಕ ಬೆಳವಣಿಗೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದಯಾನಂದ ಸಂಗಮ, ರಮೇಶ ಸೂರ್ಯವಂಶಿ, , ಶಿವಕುಮಾರ್, ರಾಜಕುಮಾರ್, ಸ್ವರೂಪಾವತಿ, ಎಸ್.ಲಕ್ಷ್ಮಿ, ರಾಜಕುಮಾರ ಶಿಂಧೆ , ಸಂಗೀತಾ, ಮಂಜುಳಾ, ಸುನೀಲ್ , ಸಂಜೀವಕುಮಾರ್ ಇತರರಿದ್ದರು. ಶಿಕ್ಷಕ ಇಮಾನವೆಲ ಮಾನಕರೆ ವಂದಿಸಿದರು. ರಮೇಶ ಸೂರ್ಯವಂಶಿ ನಿರೂಪಣೆ ಮಾಡಿದರು.