ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ
ಔರಾದ : ಆ.30: ಪಟ್ಟಣದಲ್ಲಿ ಪ್ರಥಮ ಬಾರಿಗೆ ಉದ್ಭವಲಿಂಗ ಶ್ರೀ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ಹಾಗೂ ಪ್ರಭು ಎಂಟಪ್ರ್ರೈಸಸ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ದಹಿ ಹಂಡಿ ಉತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುವ ನಿಮಿತ್ಯ ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ದಹಿ ಹಂಡಿ ಉತ್ಸವ ಸಮಿತಿ ಅಧ್ಯಕ್ಷ ಶಿವರಾಜ ಅಲ್ಮಾಜೆ ಅವರು ಮಾತನಾಡಿ ಪ್ರಥಮ ಬಾರಿಗೆ ಪಟ್ಟಣದಲ್ಲಿ ನಡೆದ ದಹಿ ಹಂಡಿ ಉತ್ಸವದಲ್ಲಿ ಹತ್ತಾರು ತಂಡಗಳು ಭಾಗಿಯಾಗಿ ಉತ್ಸವಕ್ಕೆ ಮೆರಗು ನೀಡಿದವು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸಿದ್ದಾರೆ, ಉತ್ಸವದಲ್ಲಿ ಪಾಲ್ಗೊಂಡು ಎಲ್ಲ ಕಲಾ ತಂಡಗಳಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಶಿವರಾಜ ಅಲ್ಮಾಜೆ, ಸಂದೀಪ ಪಾಟೀಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಬಾದಾಸ ನಳಗೆ, ಬಸವರಾಜ ಹಳ್ಳೆ ,ಅಶೋಕ ಶೇಂಬೆಳ್ಳಿ, ಮಲ್ಲಿಕಾರ್ಜುನ ಟೆಕರಾಜ ಕಾಲೇಜಿನ ಪ್ರಾಂಶುಪಾಲ ಅಂಬಿಕಾದೇವಿ ಕೋತಮಿ, ಪ್ರಾಧ್ಯಾಪಕರಾದ ಡಾ.ಅಶೋಕ ಕೋರೆ, ಡಾ.ಜೈಶೀಲಾ, ಊರ್ವಶಿ, ಬೋಧಕ ಭೋದಕೆತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಅಭಿನಂಧಿಸಿ ಗೌರವಿಸಲಾಯಿತು.