ಶರಣ ಶಿವಲಿಂಗೇಶ್ವರ ಸಾಧು ಮಹಾರಾಜರ ಪಲ್ಲಕ್ಕಿ ಉತ್ಸವ 5ಕ್ಕೆ
ಆಳಂದ:ಆ.30: ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿನ ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರ ಸಾಧು ಮಹಾರಾಜರ ಅಡಪಲ್ಲಕ್ಕಿ ಮಹೋತ್ಸವ ಸೆ. 5ರಂದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಡಗರ ಸಂಭ್ರಮದ ಮಧ್ಯ ಅದ್ಧೂರಿಯಾಗಿ ನಡೆಯಲಿದೆ ಎಂದು ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಶ್ರೀಮಠದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಶ್ರಾವಣ ಮಾಸದ ಅಂಗವಾಗಿ ನಿತ್ಯ ಬೆಳಗೆ 4:00 ಗಂಟೆಗೆ ಓಂ ನಮಃ ಶಿವಾಯ ಮಹಾಮಂತ್ರ ಪಟ್ಟಿಸುತ್ತಾ ಗ್ರಾಮದಲ್ಲಿ ಪ್ರಭಾತಪೇರಿ ಮತ್ತು ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರ ಮೂರ್ತಿಯ ಪಾದಪೂಜೆ, ಭಜನೆ ರುದ್ರಾಭಿಷೇಕ ಕಾರ್ಯಕ್ರಮಗಳು ಬೆಳ್ಳಿಗೆ ಮತ್ತು ಸಂಜೆ ಸಾಗಿಬರುತ್ತಿವೆ.
ಸೆ.3ರಂದು ಅಮವಾಸ್ಯೆಂದು ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ ಜರುಗಲಿದೆ. ಸೆಪ್ಟೆಂಬರ್ 5ರಂದು ಬೆಳಗಿನ 4:00 ಭಕ್ತಾದಿಗಳಿಂದ ಪ್ರಮುಖ ರಸ್ತೆಗಳಲ್ಲಿ ಮೂಲಕ ಪ್ರಭಾತ್ ಪೇರಿಸಾಗಿ ಶ್ರೀಮಠಕ್ಕೆ ತಲುಪಿ ಮಹಾಮಂಗಳಾರತು ನಡೆಯುವುದು 7:00 ಗಂಟೆಯಿಂದ 10 ಗಂಟೆವರೆಗೆ ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರ ಮೂರ್ತಿಯ ಪಾದಪೂಜೆ ನಂತರ ಶರಣ ಶಿವಲಿಂಗೇಶ್ವರ ಮೂರ್ತಿಯ ಅಡ್ಡ ಪಲ್ಲಕ್ಕಿ ಉತ್ಸವ ಪ್ರಮುಖ ರಸ್ತೆಗಳ ಮೂಲಕ ವಾದ್ಯ ವೈಭವಗಳೊಂದಿಗೆ ಸಾಗಿ ಶ್ರೀಮಠಕ್ಕೆ ಆಗಮಿಸಲಿದೆ. ಸೆಪ್ಟೆಂಬರ್ 6 ರಂದು ಸಂಜೆ 4:00ಗೆ ಭಜನ ಕಾರ್ಯಕ್ರಮ 7:00 ಗಂಟೆಗೆ ಶಿವಲಿಂಗೇಶ್ವರ ತೊಟ್ಟಿಲು ಕಾರ್ಯಕ್ರಮ ನೆರವೇರಲಿದೆ ಎಂದು ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.