ಪಕ್ಷ ಸಂಘಟನೆಗೆ ಶ್ರಮಿಸೋಣ: ನಿತೀನ್ ಗುತ್ತೇದಾರ್
ಅಫಜಲಪುರ: ಆ.30:ವಿಧಾನಸಭಾ ಮತಕ್ಷೇತ್ರಕ್ಕೆ 40 ಸಾವಿರ ಸದಸ್ಯತ್ವ ನೋಂದಣಿ ಟಾರ್ಗೆಟ್ ನೀಡಿದ್ದು,ನಾವೆಲ್ಲರೂ ಸೇರಿ 80 ಸಾವಿರ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಬೇಕು. ಕಲಬುರಗಿ ಜಿಲ್ಲೆಯಲ್ಲೇ ಅಫಜಲಪುರ ಸದಸ್ಯತ್ವ ನೋಂದಣಿಯಲ್ಲಿ ಪ್ರಥಮ ಸ್ಥಾನ ಬರುವಂತೆ ಮಾಡಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಕರೆ ನೀಡಿದರು.
ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಅಫಜಲಪುರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ದೇಶದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಏಕೈಕ ಪಕ್ಷವಾಗಿದೆ.ಸೆ.2ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.30 ದಿನಗಳ ಕಾಲ ನಿರಂತರವಾಗಿ ಪಕ್ಷಕ್ಕಾಗಿ ಶ್ರಮಿಸಬೇಕು, ಅಂದಾಗ ಮಾತ್ರ ನರೇಂದ್ರ ಮೋದಿಯವರ ಕೈ ಬಲಪಡಿಸಲು ಸಾಧ್ಯವಾಗುತ್ತದೆ.ಪ್ರತಿಯೊಂದು ಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ,ಸಾಮಾಜಿಕ ಜವಾಬ್ದಾರಿ ಹೊಂದಿರುವ ಬಿಜೆಪಿ ಪಕ್ಷವು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ದೇಶದಲ್ಲಿಯೇ 19 ಕೋಟಿ ಸದಸ್ಯತ್ವ ಹೊಂದಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ.ಪಕ್ಷದಿಂದ 40 ಸಾವಿರ ಟಾರ್ಗೆಟ್ ನೀಡಿದ್ದಾರೆ.ಆದರೆ ನಾವೆಲ್ಲರೂ 1 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಬೇಕು. ಕಲಬುರಗಿ ಜಿಲ್ಲೆಯಲ್ಲೇ ಅಫಜಲಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿರುವ ಕ್ಷೇತ್ರವಾಗಬೇಕು ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ವಿದ್ಯಾಧರ ಮಂಗಳೂರೆ ಮಾತನಾಡಿ,ಅಫಜಲಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಬೇಕಿದೆ.ಇಲ್ಲಿವರೆಗೂ ಒಬ್ಬರು ಸಹ ಬಿಜೆಪಿ ಪಕ್ಷದಿಂದ ಶಾಸಕರು ಆಗಿಲ್ಲ,ಹೀಗಾಗಿ ಮುಂದೆ ಬಿಜೆಪಿ ಪಕ್ಷದ ಬಾವುಟ ಹಾರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು.ಸದಸ್ಯತ್ವ ಅಭಿಯಾನದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬರಬೇಕು,ರಾಜ್ಯಾಧ್ಯಕ್ಷರ ಸೂಚನೆಯಂತೆ 40 ಸಾವಿರಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಬೇಕು.
ಈ ಸಂದರ್ಭದಲ್ಲಿ ಅರವಿಂದ್ ನವಲೇ,ಅಶೋಕ್ ಬಗಲಿ, ಶೈಲೇಶ್ ಗುಣಾರಿ, ಶರಣು ಪದಕಿ, ಗಣಪತಿ ಬಿರಾದಾರ,ಜ್ಯೋತಿಪ್ರಕಾಶ್ ಪಾಟೀಲ್,ಸುಭಾಷ ರಾಠೋಡ, ಜಗದೀಶ್ ಪಡಶೆಟ್ಟಿ, ಸಿದ್ದರಾಮ ಚೌಕಿಮಠ,ರವಿ ಕುಲಾಲಿ,ರಾಜಶೇಖರ ಜಿಡ್ಡಿಗಿ,ವೈಜನಾಥ ನಿಂಗದಳ್ಳಿ, ಪ್ರಭು ದೇವತ್ಕಲ್,ಮಾಳಪ್ಪ ಪುಜಾರಿ,ಶ್ರೀದೇವಿ ಗುಣಾರಿ, ವಿಜಯಕುಮಾರ ದೇಸಾಯಿ, ಬಾಬುರಾವ್ ನೋಲೆಕರ, ಮಲ್ಲಿಕಾರ್ಜುನ ನಿಂಗದಳ್ಳಿ, ರಮೇಶ್ ನಿಲಗಾರ, ಬೀರಣ್ಣಾ ಕಲ್ಲೂರ, ಸುನೀಲ್ ಶೆಟ್ಟಿ, ಧಾನು ಪತಾಟೆ, ಶಂಕರ ಮ್ಯಾಕೇರಿ, ವಿಶ್ವನಾಥ್ ರೇವೂರ, ಶಹಾಬುದ್ದೀನ್ ಅತ್ತಾರ, ನಾಗೇಶ್ ಕೊಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ:
ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಶರಣು ಪದಕಿ, ಧಾನು ಪತಾಟೆ,ಓಬಿಸಿ ಮೋರ್ಚಾ ಅಧ್ಯಕ್ಷರಾಗಿ ಮಾಳಪ್ಪ ಪುಜಾರಿ, ಪ್ರಧಾನ ಕಾರ್ಯದರ್ಶಿ ಶರಣು ಜಮಾದಾರ,ಮಲ್ಲಪ್ಪ ಪುಜಾರಿ, ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರಾಗಿ ಬಾಬು ನವಲೇಕರ್, ಪ್ರಧಾನಕಾರ್ಯದರ್ಶಿ ಅರುಣ ಹರಳಯ್ಯ, ಸಂತೋಷ ರಾಠೋಡ,ರೈತ ಮೋರ್ಚಾ ಅಧ್ಯಕ್ಷರಾಗಿ ವಿಜಯಕುಮಾರ ದೇಸಾಯಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಸೂರಗೊಂಡ,ಶ್ರೀಪತಿ ಭೂತಿ, ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷರಾಗಿ ಗಣಪತಿ ಬಿರಾದಾರ, ಪ್ರಧಾನಕಾರ್ಯದರ್ಶಿ ಚಂದ್ರಕಾಂತ ಬಡದಾಳ, ಸಚಿನ್ ಮ್ಯಾಕೇರಿ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾಗಿ ಶಹಾಬುದ್ದೀನ್ ಅತ್ತಾರ, ಪ್ರಧಾನಕಾರ್ಯದರ್ಶಿ ಅಬ್ಬಾಸಲಿ ಮುಲ್ಲಾ, ಹುಸೇನಸಾಬ ದಸ್ತಗೀರಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಶ್ರೀದೇವಿ ಗುಣಾರಿ, ಪ್ರಧಾನ ಕಾರ್ಯದರ್ಶಿ ಸೋನಾಲಿ ಯಾದವ್,ವಿದ್ಯಾವತಿ ಕಲಶೆಟ್ಟಿ ಅವರನ್ನು ನೇಮಕ ಮಾಡಲಾಯಿತು.