ಪೂರ್ವಭಾವಿ ಸಭೆ
ಲಕ್ಷ್ಮೇಶ್ವರ,ಆ.30:ಪಟ್ಟಣದ ಶಂಕರ್ ಭಾರತಿ ಕಲ್ಯಾಣ ಮಂಟಪದಲ್ಲಿ ಸಂಜೆ ಪಟ್ಟಣದಲ್ಲಿ ಗಣೇಶ ಮಹಾಮಂಡಲ ರಚನೆಯ ಕುರಿತು ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಗದಗ ಜಿಲ್ಲಾ ಸಾರ್ವಜನಿಕ ಗಜಾನುನೋತ್ಸವ ಮಹಾಮಂಡಲದ ಸಂಚಾಲಕ ರಾಜು ಖಾನಪ್ಪನವರ್ ಮಾತನಾಡಿದರು.
ಶ್ರೀರಾಮ ಸೇನೆ ತಾಲೂಕ ಸಂಚಾಲಕ ಈರಣ್ಣ ಪೂಜಾರ ಡಿಎಸ್‍ಎಸ್ ಸಂಚಾಲಕ ಸುರೇಶ ನಂದಣ್ಣನವರ ಮಂಜುನಾಥ ಹೋಗೆ ಸೊಪ್ಪಿನ ಮಾತನಾಡಿ ಗಣೇಶ್ ಉತ್ಸವವನ್ನು ಅತ್ಯಂತ ಭಕ್ತಿ ಭಾವದಿಂದ ಆಚರಿಸಬೇಕು ಎಂದು ಹೇಳಿದರು.
ಗಣೇಶ್ ಚತುರ್ಥಿ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶಭಕ್ತಿ ಗೀತೆಗಳು ರಂಗೋಲಿ ಸ್ಪರ್ಧೆ ಸ್ವಾತಂತ್ರ ಹೋರಾಟಗಾರರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲು ಸೂಚಿಸಲಾಯಿತು.
ಗದಗ ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಬಸವರಾಜ್ ಹಿರೇಮನಿ ಬಸವರಾಜ್ ಚಕ್ರಸಾಲಿ ಗಂಗಾಧರ್ ಮೆಣಸಿನಕಾಯಿ ಸಲಹೆ ಸೂಚನೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಗದಗ ತಾಲೂಕ ಶ್ರೀರಾಮ ಸೇನೆ ಸಂಚಾಲಕ ಭರತ್ ಲದ್ದಿ ಬಿಜೆಪಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ ವಿಜಯ್ ಕುಮಾರ್ ಮೋಹನಂದಣ್ಣನವರ್ ಭರ್ಮಪ್ಪ ಶರ ಶೂರಿ ಲೋಕೇಶ ಸುತಾರ ಅಮಿತ್ ಗುಡಿಗೇರಿ ಪ್ರವೀಣ್ ವ್ಯಾಪಾರಿ ಕಿರಣ ಚಿಲ್ಲೂಲಮಠ ಮಲ್ಲನಗೌಡ ಪಾಟೀಲ ಚಿನ್ನುಹಾಳ ತೋಟದ ಅಭಿಷೇಕ್ ಸಾತ್ ಪೂತೆ ಅನಿಲ್ ಮುಳಗುಂದ ಮುರುಗೇಂದ್ರ ಸ್ವಾಮಿ ಹಿರೇಮಠ, ಗಂಗಾಧರ್ ಜಕ್ಕಣ್ಣವರ್ ಸೇರಿದಂತೆ ಅನೇಕರಿದ್ದರು.