ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ರೂ.48 ಲಕ್ಷ ಮಂಜೂರು: ಶಾಸಕ ಯತ್ನಾಳ
ವಿಜಯಪುರ,ಆ.30: 2024-25ನೇ ಸಾಲಿಗೆ ನಗರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಎಸ್.ಸಿಪಿ, ಟಿ.ಎಸ್.ಪಿ ಯೋಜನೆಗೆ ರೂ.48 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ವಾರ್ಡ ನಂ.3ರ ಗ್ಯಾಂಗ ಬಾವಡಿ (ಜಯನಗರ) ವೀರಶೈವ ಕಕ್ಕಯ್ಯ ಕಲ್ಯಾಣ ಮಂಟಪ ಶಿವ ಮಂದಿರ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ, ವಾರ್ಡ್ ನಂ.10ರ ವಡ್ಡರ ಓಣಿಯ ಪಾಂಡುರಂಗ ವಿಠ್ಠಲ ದೇವಸ್ಥಾನದ ಹತ್ತಿರ ಒಳಾಂಗಣ ಸಾಂಸ್ಕøತಿಕ ಭವನಕ್ಕೆ ರೂ.15 ಲಕ್ಷ, ವಾರ್ಡ್ ನಂ.14ರ ರಾಣಿಬಗೀಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ.10 ಲಕ್ಷ, ತೊರವಿ ತಾಂಡಾ ನಂ.1 ಸೇವಾಲಾಲ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.8 ಲಕ್ಷ, ವಾರ್ಡ್ ನಂ.18ರ ಹರಣಶಿಕಾರಿ ಓಣಿಯ ಲಕ್ಷ್ಮೀ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.5 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.