ಬೀಳ್ಕೊಡುಗೆ ಅಂತಿಮವಲ್ಲ, ಹೊಸತನದ ಆರಂಭ:ಡಾ. ವೈ.ವೈ. ಕೊಕ್ಕಣವರ
ವಿಜಯಪುರ,ಆ.30:ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಬಂಗಾರಮ್ಮ ಮಹಿಳಾ ಮಹಾವಿದ್ಯಾಲಯದಲ್ಲಿ ಸಾಂಸ್ಕøತಿಕ ವೇದಿಕೆಯ ವತಿಯಿಂದ, ಐಕ್ಯೂಎಸಿಯ ಅಡಿಯಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಾ. ವೈ.ವೈ. ಕೊಕ್ಕಣವರ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರತಿಭೆಗಳನ್ನು ಹೊರತರುವುದು ಶಾಲಾಕಾಲೇಜುಗಳ ಮುಖ್ಯ ಉದ್ದೇಶವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಆತ್ಮವಿಸ್ವಾಸ ಮತ್ತು ಸಮಯ ಪ್ರಜ್ಞೆ ಬಹುಮುಖ್ಯ, ಕೆಟ್ಟ ಹವ್ಯಾಸಗಳಿಗೆ ಧಾಸರಾಗದೆ ತಂದೆ ತಾಯಿಯರ ತ್ಯಾಗಕ್ಕೆ ಧಾಸರಾಗಿ ಸಮಾಜದಲ್ಲಿ ಸಾಧಕರಾಗಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ವಿಶೇಷ ಅವ್ಹಾನಿತರಾಗಿ ಆಗಮಿಸಿದ ಬಿ.ಎಲ್.ಡಿ.ಈ ಸಂಸ್ಥೆಯ ಎಸ್.ಎಸ್ ಆವರಣದ ಆಡಳಿತ ಅಧಿಕಾರಿಗಳಾದ ಐ.ಎಸ್ ಕಾಳಪ್ಪನವರ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿನಿಯರ ಅನಿಸಿಕೆಗಳನ್ನು ಕೇಳಿ ಭಾವುಕರಾಗಿ ಇಲ್ಲಿ ವಿದ್ಯಾರ್ಥಿ ಶಿಕ್ಷಕರ ನಡುವೆ ಅನೋನ್ಯ ಸಂಬಂಧವಿದೆ. ಅದು ಭವಿಷ್ಯಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ವೈ. ತಮ್ಮಣ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯ ಮೇಲೆ ಐಕ್ಯೂಎಸಿ ಸಂಯೋಜನಾಧಿಕಾರಿ ವ್ಹಿ.ಎಸ್.ನಂದೇಶ, ಕ್ರೀಡಾ ನಿರ್ದೇಶಕ ಡಾ. ಸವಿತಾ ಅಣ್ಣೆಪ್ಪನವರ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು.. ಐಶ್ವರ್ಯಾ ಅಂಗಡಿ, ಅಕ್ಷತಾ ಬಿಸನಾಳ ಉಪಸ್ಥಿತರಿದ್ದರು.
ಇತಿಹಾಸ ಪ್ರಾಧ್ಯಾಪಕ ಮಲ್ಲಿಕಾರ್ಜುನ ಕೆ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕಿ ಸವಿತಾ ಲಮಾಣಿ ನಿರೂಪಿಸಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ. ರೇಣುಕಾದೇವಿ ಕಮತರ ವಂದಿಸಿದರು.
ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.