ಸಿಂಧನಕೇರಾ ಗ್ರಾಪಂ. ವ್ಯಾಪ್ತಿಯ ಹಣಕುಣಿ ಯಲ್ಲಿ ಕೃಷಿಹೊಂಡ ಅವ್ಯವಹಾರದ ಆರೋಪಶೀಘ್ರ ಪರಿಶೀಲನೆಗೆ ದಲಿತ ಮುಖಂಡರ ಆಗ್ರಹ
ಹುಮನಾಬಾದ್ :ಆ.30:ತಾಲೂಕಿನ ಸಿಂಧನಕೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಣಕುಣ ಗ್ರಾಮದಲ್ಲಿ ಕೈಗೊಂಡ ಕೃಷಿಹೊಂಡ ಕಾಮಗಾರಿಯ ಅವ್ಯವಹಾರದ ಕುರಿತು ಪರಿಶೀಲನೆಗೆ ಆಗ್ರಹಿಸಿ. ಪಟ್ಟಣದ ತಾಲೂಕ ಪಂಚಾಯತ ಕಚೇರಿಯಲ್ಲಿ ಗುರುವಾರ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ತಾಲೂಕು ಸಮಿತಿ ವತಿಯಿಂದ ತಾಲೂಕ ಪಂಚಾಯತ್ ಇಒ ದೀಪಿಕಾ ನಾಯ್ಕರ್‍ಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಳಿಕ ಸಂಘಟನೆ ತಾಲೂಕ ಅಧ್ಯಕ್ಷ ಗಣಪತಿ ಅಷ್ಟೋರೆ ಮಾತನಾಡಿ, ಸಿಂಧನಕೇರಾ ಗ್ರಾಪಂ. ವ್ಯಾಪ್ತಿಯ ಹಣಕುಣ ಗ್ರಾಮದ ಸರ್ವೆ ನಂಬರ 33ರಲ್ಲಿ ಭೂಮಾಲಿಕರಿಂದ ಅನುಮತಿ ಪಡೆಯದೇ ಕೈಗೊಂಡ ಒಟ್ಟು 3 ಕೃಷಿಹೊಂಡ ಕಾಮಗಾರಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕುರಿತು ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಉಪಾಧ್ಯಕ್ಷ ಸುಶೀಲಕುಮಾರ ಭೋಲಾ, ಅನಂತ ಮಾಳಗೆ, ಬಸವರಾಜ ಸಿಂಧೆ, ವಿಶಾಲ ಸಿಂಧನಕೇರಾ, ಗೌತಮ ಜಾನವೀರ, ಸಿದ್ಧಾರ್ಥ ಜಾನವೀರ, ವಿಜಯಕುಮಾರ ಹಳ್ಳಿಖೇಡಕರ್, ದೇವೀಂದ್ರ ಗದ್ದಾರ್, ಆಕಾಶ ಸಿಂಧೆ, ಅಜಯಕುಮಾರ ವಳಖಿಂಡಿಕರ್, ಮಹಾವೀರ ದೊಡ್ಡಿ, ಗೌತಮ ಮೊಳಕೇರಾ, ಮಾಣಕ ಇದ್ದರು.