ನಾಟಕ ಎಲ್ಲವನ್ನು ಒಳಗೊಂಡ ಸಮಗ್ರ ಕಲೆ
ಬಸವನಬಾಗೇವಾಡಿ:ಆ.30:ನಾಟಕವು ಎಲ್ಲವನ್ನು ಒಳಗೊಂಡ ಸಮಗ್ರ ಕಲೆಯಾಗಿದ್ದು, ಇದನ್ನು ಪ್ರತಿಯೊಬ್ಬರು ಸ್ವಿ?ಕರಿಸುವಂತಾಗಬೇಕು. ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ, ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮಥ್ರ್ಯ ನಾಟಕಗಳಿಗಿದೆ. ನಾಟಕಗಳಿಗೆ ಎಲ್ಲಾ ಕಾಲದಲ್ಲೂ ಬೆಲೆ ಇದೆ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಅಭಿಪ್ರಾಯಪಟ್ಟರು.
ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಂದೀಶ್ವರ ರಂಗ ಮಂದಿರದಲ್ಲಿ ಆಯೋಜಿಸಿದ್ದ ಮಹಾಶ್ರೀ ಭಗೀರಥ ನಾಟ್ಯಸಂಘ ಮಹಾಲಿಂಗಪುರ ಇವರಿಂದ ಮಾನವಂತರ ಮನೆತನ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಾಟಕ ಪುರಾತನ ಗಂಡು ಕಲೆ. ರಂಗಭೂಮಿ ಬದುಕಿನ ಕನ್ನಡಿ ಹಾಗೂ ನೆ?ಜ ಕಲೆಯಾಗಿದ್ದು, ಪ್ರೆ?ಕ್ಷಕರೇ ಇದರ ಜೀವಾಳವಾಗಿದ್ದಾರೆ ಎಂದರು.
ಜಾಗತೀಕರಣ ಮತ್ತು ಅಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕøತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಇಂದು ಹೆಚ್ಚು ಜನರನ್ನು ತಲುಪುತ್ತಿಲ್ಲ. ಜನತೆ ಸಿನಿಮಾ, ಟಿವಿ ಕಡೆಗೆ ಆಕರ್ಷಿತರಾಗಿ ನಾಟಕಗಳನ್ನು ನೋಡುವುದನ್ನೆ? ಕಡಿಮೆ ಮಾಡಿದ್ದಾರೆ ಎಂದು ವಿಷಾಧಿಸಿದ ಅವರು, ಸಿನಿಮಾ, ಧಾರವಾಹಿಗಳ ಪ್ರಭಾವ ಎಷ್ಟೆ? ಬೀರಿದರೂ ನಾಟಕ ಎಂದಿಗೂ ಜೀವಂತವಾಗಿರುತ್ತದೆ ಎಂದು ತಿಳಿಸಿದರು.
ನಾಟಕಗಳನ್ನು ಜನರು ಹೆಚ್ಚು ಹೆಚ್ಚು ನೋಡಿದಾಗ ಮತ್ತು ಹೆಚ್ಚು ಹೆಚ್ಚು ಪ್ರದರ್ಶನಗಳಾದಾಗ ಮಾತ್ರ ನಾಟಕಗಳ ಸಾರ್ಥಕತೆ ಪಡೆಯುತ್ತವೆ. ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕು. ಕಲಾವಿದರು ಬದುಕು ಎಷ್ಟೆ? ಸಂಕಷ್ಟದಲ್ಲಿದ್ದರೂ ತಮ್ಮ ರಕ್ತಗತವಾದ ಕಲೆಯಿಂದ ಸಮಾಜದ ಸಂಕಷ್ಟಗಳನ್ನು ಮರೆಸಿ, ಮನರಂಜಿಸುತ್ತಾರೆ. ಆಧುನಿಕ ಯುಗದ ಒತ್ತಡಗಳಿಗೆ ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳು ಅವನತಿಗೊಳ್ಳುತ್ತಿವೆ. ರಾಜ್ಯದಲ್ಲಿ ಹಿಂದೊಮ್ಮೆ ನಾಟಕಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು ಈಗ ಆ ಪರಿಸ್ಥಿತಿ ಇಲ್ಲವಾಗಿದೆ. ಅಳಿದುಳಿದ ಕೆಲವು ವೃತ್ತಿ ರಂಗಭೂಮಿ ಕಂಪನಿಗಳು ಈ ನಾಟಕದ ಪರಂಪರೆಯನ್ನು ಮುಂದುವರೆಸುತ್ತಿವೆ. ಇವರಿಗೆ ನಮ್ಮ ಸಹಕಾರ, ಪೆÇ್ರ?ತ್ಸಾಹ ನೀಡಬೇಕಿದೆ ಎಂದು ಸಲಹೆ ನೀಡಿದರು.ಡೊಲಕ ಬಾರಿಸುವುದರ ಮೂಲಕ ಮುಖಂಡರಾದ ಉಮೇಶ ಹಾರಿವಾಳ ಉದ್ಘಾಟಿಸಿದರು
ಹಿಂದೆ ಪ್ರತಿಯೊಂದು ಊರಿನ ಜಾತ್ರೆಯಲ್ಲಿ ಮತ್ತು ಹಬ್ಬಗಳಲ್ಲಿ ನಾಟಕಗಳ ಪ್ರದರ್ಶನ ಹೆಚ್ಚಾಗಿ ನಡೆಯುತ್ತಿದ್ದವು. ಆಗ ನಾಟಕ ನೋಡಬೇಕಾದರೆ ಜಾತ್ರೆಗಾಗಿ ಕಾಯಬೇಕಾಗಿತ್ತು. ವೃತ್ತಿ ರಂಗಭೂಮಿಯನ್ನು ನೆಚ್ಚಿಕೊಂಡು ಬದುಕುತ್ತಿರುವ ಇಂತಹ ನಾಟಕ ಕಂಪನಿಗಳು ಬೆರಳೆಣಿಕೆಯಷ್ಟಿದ್ದು, ನಿರಂತರ ಪ್ರಸಾರವಾಗುತ್ತಿರುವ ಮನರಂಜನಾ ಕಾರ್ಯಕ್ರಮಗಳು ಅಭಿವೃದ್ಧಿಗೆ ಅಡ್ಡವಾಗಿವೆ. ನಾಟಕಗಳನ್ನು ಜನರು ಹೆಚ್ಚು ವಿ?ಕ್ಷಿಸುವ ಮೂಲಕ ಕಲಾವಿದರನ್ನು ಪೆÇ್ರ?ತ್ಸಾಹಿಸಬೇಕು.
-ರಾಜೂಗೌಡ, ಮಾಜಿ ಸಚಿವ