ರೈತರ ಪರಿಶ್ರಮಕ್ಕೆ ಬೆಲೆ ಸಿಗಬೇಕಾದರೆ ಲಾಭದಾಯಿಕ ಬೆಳೆ ಬೆಳೆಯಬೇಕು
ಬಸವನಬಾಗೇವಾಡಿ:ಆ.30: ರೈತರ ಪರಿಶ್ರಮಕ್ಕೆ ಬೆಲೆ ಸಿಗಬೇಕಾದರೆ ಲಾಭದಾಯಿಕ ಬೆಳೆಗಳನ್ನು ಬೆಳೆಯಬೇಕು. ಅವರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಗುರುವಾರ ಬಸವೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ವೈಜ್ಞಾನಿಕ ಹಿನ್ನೆಲೆ ಇಟ್ಟುಕೊಂಡು ಬೇಸಾಯದಲ್ಲಿ ತೊಡಗಬೇಕು. ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ನಷ್ಟವಾಗದಂತೆ ನೋಡಿಕೊಳ್ಳಬೇಕು. ವಿಜಯಪುರ, ಬಾಗಲಕೋಟ, ಬೆಳಗಾವಿ ಜಿಲ್ಲೆಯಲ್ಲಿ ರೈತರು ಹೆಚ್ಚು ಕಬ್ಬು ಬೆಳೆಯುತಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ಬೆಳೆ ಶೇ.99 ರಷ್ಟು ಉಪಯೋಗವಿದೆ. ಕಬ್ಬು, ಮೆಕ್ಕಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಾಗ ಒಂದಿಲ್ಲ ಒಂದು ಬೆಳೆ ರೈತರ ಕೈ ಹಿಡಿಯಲಿದೆ ಎಂದು ಹೇಳಿದರು.
ಪಟ್ಟಣದ ಬಸವೇಶ್ವರ ಜಾತ್ರೆಯಲ್ಲಿ ಮೊದಲ ಬಾರಿಗೆ ಕೃಷಿಗೆ ಸಂಬಂಧಿಸಿದ ಕೃಷಿ ಮೇಳದಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ರೈತರ ಜೀವನದಲ್ಲಿ ಬದಲಾವಣೆ ತರುವ ಕೆಲಸವಾಗಲಿದೆ ಎಂದು ಹೇಳಿದರು.
ಪ್ರಗತಿಪರ ರೈತ ಎಂ.ವೈ.ಕಟ್ಟಿ ಮಾತನಾಡಿ, ರೈತರು ಸರಿಯಾದ ಬೇಸಾಯ ಕ್ರಮ ಅನುಸರಿಸಿದರೆ ಎಕರೆಗೆ 100ಕ್ಕೂ ಹೆಚ್ಚು ಟನ್ ಕಬ್ಬು ಬೆಳೆಯಬಹುದು. ನೂರು ವರ್ಷದಿಂದ ಹಿಂದೆ ಹಿರಿಯರು ಗೊಬ್ಬರ ಬಳಸದೇ ಉತ್ತಮ ಬೆಳೆ ಬೆಳೆಯಯತಿದ್ದರು. ಸಗಣಿ ಗೊಬ್ಬರ ಬಳಕೆ ಮಾಡಬೇಕು. ಇಂದಿನ ಬೆಲ್ಲ ವಿಷಕಾರಿಯಾಗಿದೆ. ಗುಣಮಟ್ಟದ ಶುದ್ಧ ಕಬ್ಬು ಬೆಳೆಯುವ ವಿಧಾನ ಅರಿಯಬೇಕು. ವಾತಾವರಣದಲ್ಲಿ ಏರುಪೆರಾಗುತ್ತಿದೆ. ಕೀಟನಾಶಕ ಬಳಕೆಯಿಂದ ಬೆಳೆಗಳಿಗೆ ಉಪಕಾರಿಯಾಗುವ ಕೀಟಗಳನ್ನು ಕೊಲ್ಲುತ್ತಿದ್ದೇವೆ. ಪ್ರತಿ ವರ್ಷ ಕಡಿಮೆ ಭೂಮಿಯಲ್ಲಿ ಎರಡೆರಡು ತಳಿ ಕಬ್ಬು ಬೆಳೆಯಿರಿ. ನಿಮಗೆ ಸರಿಯೆನಿಸಿದ ತಳಿ ಕಬ್ಬನ್ನು ಹೆಚ್ಚು ಬೆಳೆಯಲು ಮುಂದಾಗಬೇಕು. ರೈತರು ಪಾರಂಪರಿಕ ಕೃಷಿಯ ಸತ್ಯವನ್ನು ಅರಿಯಬೇಕು.
ಬೆಸಾಯದ ಮುನ್ನ ಭೂಮಿಯ ಬಾಹ್ಯ ಪರಿಸ್ಥಿತಿ ಸುಧಾರಿಸಬೇಕು, ಉತ್ತಮ ತಳಿಗಳ ಆಯ್ಕೆ, ಭೂಮಿ, ಬೀಜದ ಆತಂಕ ಸುಧಾರಣೆ, ವಾತವರಣ ಸೇರಿದಂತೆ ವಿವಿಧ ವಿಚಾರಗಳನ್ನು ಅರಿತುಕೊಂಡು ಕಬ್ಬು ಬೆಳೆಯಲು ಮೂಲಕ ವಿವಿಧ ಕಬ್ಬು ಪ್ರದರ್ಶನದ ಮೂಲಕ ಕಬ್ಬಿನ ತಳಿಗಳನ್ನು ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಎರಡು ದಿನಗಳ ವರೆಗೆ ನಡೆಯುವ ಕೃಷಿ ಮೇಳದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಮುಖ್ಯಸ್ಥ (ಡಿನ್) ಎ.ಭೀಮಪ್ಪ, ವಿಸ್ತರಣಾಧಿಕಾರಿ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ,ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, , ಅನಿಲ ಅಗರವಾಲ, ಶಿವನಗೌಡ ನಿರಾದಾರ, ಸಂಗನಗೌಡ ಚಿಕ್ಕೊಂಡ, ಬಿ.ಕೆ.ಕಲ್ಲೂರ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಡಿ.ಡಬ್ಲೂ.ರಾಜಶೇಖರ, , ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಎಂ.ಎಚ್.ಯರಝರಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ದಯಾನಂದ ಹಿರೇಮಠ,
ರವಿ ರಾಠೋಡ ಸ್ವಾಗತಿಸಿದರು, ಎಂ.ಬಿ.ತೋಟದ ನಿರೂಪಿಸಿದರು.ಶಂಕರಗೌಡ ಬಿರಾದಾರ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕೃಷಿ ಮೇಳದಲ್ಲಿ ಹಣ್ಣು, ತರಕಾರಿ, ಮಾವಿನ ಸಸಿಗಳು, ಸಾವಯವ ಬೆಲ್ಲ, ಗುಣಮಟ್ಟದ ಅಡುಗೆ ಎಣ್ಣೆ, ವಿವಿಧ ಮಳಿಗೆಗಳನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು.