ಆದಾಯ ತೆರಿಗೆ ಇಲಾಖೆಯ ನಿರೀಕ್ಷೆಗಳು ಮತ್ತು ಅನುಸರಣೆಯಿಲ್ಲದ ತೆರಿಗೆ ಪಾವತಿದಾರರು : ಉಪನ್ಯಾಸ
ಸಂಜೆವಾಣಿ ವಾರ್ತೆ
ಬಳ್ಳಾರಿ, ಆ. 30: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಎಸ್‍ಐಆರ್‍ಸಿ ಆಫ್ ಐಸಿಎಐಯ ಬಳ್ಳಾರಿ ಶಾಖೆಯ ಜಂಟಿ ಆಶ್ರಯದಲ್ಲಿ `ಆದಾಯ ತೆರಿಗೆ ಇಲಾಖೆಯ ನಿರೀಕ್ಷೆಗಳು ಮತ್ತು ಅನುಸರಣೆಯಿಲ್ಲದ ತೆರಿಗೆ ಪಾವತಿದಾರರು’ ವಿಷಯದ ಕಾರ್ಯಾಗಾರ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಗುರುವಾರ ನಡೆಯಿತು.
ಎಸ್‍ಐಆರ್‍ಸಿ ಆಫ್ ಐಸಿಎಐನ ಬಳ್ಳಾರಿ ಶಾಖೆಯ ಅಧ್ಯಕ್ಷ ಸಿಎ ವೆಂಕಟನಾರಾಯಣ ಸಿ, ಕಾರ್ಯದರ್ಶಿ ಸಿಎ ಸ್ವಪ್ನಪ್ರಿಯಾ ಕೆ.ವಿ, ಸಿಎ ರಾಜೇಶ್ ಬಗ್ರೇಚಾ, ಸಿಎ ಕೆ. ರಾಜಶೇಖರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು,
ತೆರಿಗೆದಾರರು ರಿಟರ್ನ್‍ಗಳನ್ನು ನಿಗಧಿತ ಅವಧಿಯ ಒಳಗಾಗಿ ಸಲ್ಲಿಸದಿದ್ದಲ್ಲಿ ದಂಡ ಪಾವತಿ ಮಾಡಬೇಕಾಗಬಹುದು. ಕಾರಣ ತೆರಿಗೆ ಪಾವತಿದಾರರು ಸಕಾಲದಲ್ಲಿ ರಿಟರ್ನ್‍ಗಳನ್ನು ಪಾವತಿಸಬೇಕು ಎಂದರು.
ಸಿಎ ಕೆ. ರಾಜಶೇಖರ ಅವರು, ತೆರಿಗೆ ಪಾವತಿದಾರರು ತೆರಿಗೆ ಪಾವತಿ ಮಾಡುವಾಗ ಪಾಲಿಸಬೇಕಾದ ನಿಯಮಗಳು – ಸಲ್ಲಿಸಬೇಕಾದ ಪೂರಕ ದಾಖಲೆಗಳು, ತೆರಿಗೆ ನಿಗಧಿ ಮತ್ತು ಪಾವತಿ ಸೇರಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಸಿಎ ರಾಜೇಶ ಬಾಗ್ರೇಚ್ ಅವರು, ಆದಾಯ ತೆರಿಗೆ ಇಲಾಖೆಯ ನಿರೀಕ್ಷೆಗಳ ಕುರಿತು ಉಪನ್ಯಾಸ ನೀಡಿ,
ಆದಾಯ ತೆರಿಗೆ ಇಲಾಖೆಗೆ ಲೆಕ್ಕಪತ್ರಗಳನ್ನು – ದಾಖಲೆಗಳನ್ನು ಸಲ್ಲಿಸುವಾಗ ಸರಿಯಾದ ದಾಖಲೆಗಳನ್ನೇ ಸಲ್ಲಿಸಬೇಕು. ಇಲಾಖೆಗೆ ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ಕಾಯ್ದಿರಿಸಿಕೊಳ್ಳಬೇಕು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು ಸ್ವಾಗತಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು. ಸಿಎ ಸ್ವಪ್ನ ಪ್ರಿಯಾ ಕೆ.ವಿ. ಅವರು ಕಾರ್ಯಕ್ರಮ ನಿರೂಪಿಸಿದರು.
ಈ ಉಪನ್ಯಾಸ ಶಿಬಿರದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಕಮಟಿಗಳ ಚೇರ್ಮನ್‍ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ಚಾರ್ಟೆಡ್ ಅಕೌಂಟೆಂಟ್‍ಗಳು, ಇತರೆ ಸಂಘ-ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
One attachment • Scanned by Gmail