ಹಾಲುಮತ ಸಂಸ್ಕೃತಿ ಹೆಮ್ಮೆಯ ಸಂಸ್ಕೃತಿ. ಉಪನ್ಯಾಸಕ ಮುದ್ದಪ್ಪ
ಸಂಜೆವಾಣಿ ವಾರ್ತೆ
  ಹಗರಿಬೊಮ್ಮನಹಳ್ಳಿ::ಆ.30  ಹಾಲುಮತ ಸಂಸ್ಕೃತಿಯನ್ನು ಇಡಿ ಜಗತ್ತಿಗೆ ಗುಣಪಡಿಸಿದ ಕೀರ್ತಿ ಕುರುಬ ಸಮಾಜದ ಸಾಧಕರದ್ದು . ಆದರೆ ಸಾಧಕರ ಸಂಸ್ಕೃತಿಯನ್ನು ಮರೆತು ಇಂದು ನಾವು ಜೀವಿಸುತ್ತಿರುವುದು ದುರಂತದ ಸಂಗತಿ ಎಂದು ಕೊಪ್ಪಳದ ಉಪನ್ಯಾಸಕ ಮುದ್ದಪ್ಪ ಹೇಳಿದರು
ಕನಕ ನೌಕರರ ಸಂಘದ ನೇತೃತ್ವದಲ್ಲಿ  ಪಟ್ಟಣದ ಪಶು ವೈದ್ಯಾಧಿಕಾರಿ ಬಿ. ಚಿದಾನಂದ ಇವರ  ಮನೆಯಲ್ಲಿ ಹಾಲುಮತ ಸಂಸ್ಕೃತಿ ವೇದಿಕೆಯ ಚಿಂತನ ಮಂಥನ ಸಭೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು
ನಾಡಿನ ಎಲ್ಲಾ ಜಾತಿಯವರು ಮೆಚ್ಚುವ ಸಾಹಿತ್ಯವನ್ನು ಕುರಬ ಸಮಾಜದ ಭಂಡಾರ ನೀಡಿದೆ. ದಾಸ ಶ್ರೇಷ್ಠ ಭಕ್ತ ಕನಕದಾಸರ ಜೀವನ ಚರಿತ್ರೆಯನ್ನ ನಾವು ಒಮ್ಮೆ ಕೇಳಿದರೆ ನಮ್ಮ ಜನ್ಮ ಸಾರ್ಥಕವಾಗಲಿದೆ ಅಂತ ಮಹಾನ್ ಸಾಧಕರ ಜೀವನ ಘಾತೆಗಳು ನಮ್ಮ ಜೀವನದ ದಾರಿದೀಪವಾಗಬೇಕಾಗಿದೆ.. ಪ್ರತಿ ತಿಂಗಳು ಹಾಲುಮತ ಸಾಂಸ್ಕೃತಿಕ ವೇದಿಕೆಯ ಮೂಲಕ ಚಿಂತನ ಮಂಥನ ಸಭೆ ಮಾಡುವುದರ ಮೂಲಕ ದಾಸ ಶ್ರೇಷ್ಠರ ಚಿಂತನೆಗಳನ್ನ ಹಂಚಿಕೊಳ್ಳುವ ಕೆಲಸಕ್ಕೆ ನಾಂದಿ ಆಡೋಣ ಎಂದರು..
ಪ್ರಾಂಶುಪಾಲ ಪಲ್ಲವಿ ವೆಂಕಟೇಶ್ ಮುಖ್ಯ ಅತಿಥಿಯಾಗಿ ಮಾತನಾಡಿ ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಭಕ್ತ ಕನಕದಾಸರು ವಚನ ಸಾಹಿತ್ಯವನ್ನು ರಚನೆ ಮಾಡಿ ಶ್ರೀ ಕೃಷ್ಣ ಪರಮಾತ್ಮನ ವಚನ ಸಾಹಿತ್ಯದ ಮೂಲಕ ದರ್ಶನ ಪಡೆದ ಮಹಾನ್ ಚೇತನ ಅವರು. ಹಾಲುಮತ ಸಮಾಜದ ಸಜ್ಜಲಗುಡ್ಡದ ಶರಣಮ್ಮ ಇಟಗಿ ಭೀಮಾಂಬಿಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಇನ್ನು ಹಲವಾರು ಜನ ಸಾಧಕರ ಚರಿತ್ರೆಗಳನ್ನ ನಾವು ತಿಳಿದುಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಕುರುಬರ ಸಂಘದ ಸಂಚಾಲಕ ಬುಡ್ಡಿ ಬಸವರಾಜ ಅಧ್ಯಕ್ಷತೆ ವಹಿಸಿದ್ದರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಮೈನಹಳ್ಳಿ ಶಿವರಾಜ್. ಧರ್ಮದರ್ಶಿ ಬಣಕಾರ್ ಗೋಣೆಪ್ಪ. ಶಿಕ್ಷಕರಾದ ಮಲ್ಲಯ್ಯ. ಉದೆದಪ್ಪ.  ರಮೇಶ್ ಎಂ. ಎಸ್. ಕಲ್ಗುಡಿ. ಮೂರ್ನಾಲ್ ಇತರರು ಇದ್ದರು
 ಈ  ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಕನಕ ನೌಕರರ ಸಂಘದ ಅಧ್ಯಕ್ಷರಾದ ಎಂ ಎಸ್ ಕಲ್ಗುಡಿ ಅವರನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷರು ಸದಸ್ಯರು ಸನ್ಮಾನಿಸಿದರು