ಸಾಹಿತಿ ವಟಮ್ಮನಹಳ್ಳಿ  ಪಂಪಣ್ಣ ರ ಕಥೆ ಪಠ್ಯಪುಸ್ತಕಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಆ.30 ತಾಲೂಕಿನ ವಟ್ಟಮ್ಮನಹಳ್ಳಿಯ ಎ.ಆರ್.ಪಂಪಣ್ಣನವರ ಕಥೆ ಎಲ್ಲೋ ಜೋಗಪ್ಪ ನಿನ್ನರಮಾನೆ’ ಪದವಿ ಶಿಕ್ಷಣ ಪಠ್ಯಪುಸ್ತಕದಲ್ಲಿ ಆಯ್ಕೆಯಾಗಿದೆ.
ಸರಳ ವ್ಯಕ್ತಿತ್ವದ ಹಿರಿಯ ಸಾಹಿತಿ ಪಂಪಣ್ಣ ಮೂಲತಃ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದು ಸಾಹಿತ್ಯದಲ್ಲಿ ಕೃಷಿ ಕಂಡಕೊಂಡವರು. ಎಡಪಂಥೀಯ ಸಂಘಟನೆಗಳ ಸೆಳೆತದಿಂದ ಹತ್ತು ಹದಿನೈದು ವರ್ಷಗಳ ಕಾಲ ಸಿ.ಪಿ.ಎಂ ಪಕ್ಷದ ಕಾರ್ಯಕರ್ತರಾಗಿ ದುಡಿದವರು.ತಮ್ಮ ಸಮಾಜಮುಖಿ ಚಿಂತನೆಗಳ ಪ್ರವೃತ್ತಿಯ ಫಲದಿಂದಾಗಿಯೇ ಬರವಣಿಗೆಯ ಮೂಲಕ  ಸಾಹಿತಿಯಾದವರು. ಒಂದು ಪ್ರಬಂಧ ಸಂಕಲನ, ಮೂರು  ಕಥಾ ಸಂಕಲನ ಮುದ್ರಿಸಿ ಹೊರ ತಂದಿರುವ  ಪಂಪಣ್ಣ ಅಷ್ಟಾಗಿ ಪ್ರಚಾರ ಬಯಸದೆ
ದೂರವೇ ಉಳಿದವರು.
ಯಾವ ಸ್ಪರ್ಧೆಗೂ ಬೀಳದ ಪಂಪಣ್ಣನವರು ತಾವು ಕಂಡುಂಡ ತಮ್ಮ ಬದುಕಿನ ಲೋಕಾನುಭವವನ್ನು,ಜೀವನ ಮೌಲ್ಯಗಳ ಬಗೆಗಿನ ಬಗ್ಗೆ  ತಮ್ಮ ಸಾಹಿತ್ಯಿಕ ಕೃತಿಗಳಲ್ಲಿ ತಮ್ಮ ಪಾಡಿಗೆ ತಾವು ಮೌನದಿಂದಲೇ ದಾಖಲಿಸುತ್ತ ಹೋದವರು.
ಇವರ ಸುದೀರ್ಘ ಸಾಹಿತ್ಯ ಕೃಷಿಗೆ  ಈಗ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ
2024-25 ನೇ ಶೈಕ್ಷಣಿಕ ವರ್ಷದ ರಾಜ್ಯ ಶಿಕ್ಷಣ ನೀತಿಯ ಅಡಿಯಲ್ಲಿ ಜಾರಿಗೆ ಬಂದಿರುವ ನೂತನ ಕನ್ನಡ ಪಠ್ಯಕ್ರಮದ ಭಾಗವಾಗಿ
ಪ್ರಥಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳ ‘ವಿಜ್ಞಾನ ಸೌರಭ’ಪಠ್ಯಪುಸ್ತಕಕ್ಕೆ ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ವಿಷಯವಾಗಿದ್ದು ಅವರಿಗೆ ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ್, ಮೇಟಿ ಕೊಟ್ರಪ್ಪ, ಚಿಂತಕ ಡಾ. ಅಕ್ಕಿ ಬಸವೇಶ್ ಸೇರಿದಂತೆ   ಅನೇಕ ಬರಹಗಾರರು ಚಿಂತಕರು ಸಾಹಿತಿಗಳು ಈ ಮೂಲಕ ಪಂಪಣ್ಣನವರಿಗೆ  ಅಭಿನಂದನೆ ಸಲಿಸಿದ್ದಾರೆ .