ಕ್ರೀಡಾಪಟುಗಳಿಗೆ ಧ್ಯಾನಚಂದ್ ಮಾದರಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಆ 30  ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದ ಹಾಕಿ ಹೀರೋ ಧ್ಯಾನ್ ಚಂದ್ ಕ್ರೀಡಾಪಟುಗಳಿಗೆ ಮಾದರಿಯಾಗಿ ಬದುಕಿದ್ದರು ಎಂದು  ಸರಳಾದೇವಿ  ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೋನಿಕಾ ರಂಜನ ನುಡಿದರು.
ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ ರಾಷ್ಟ್ರೀಯ ಕ್ರೀಡಾ ದಿನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಕ್ರೀಡಾ ದಿನ ಎಂದು ಆಚರಿಸಲು ಹೇಳಿದ ಧ್ಯಾನ್ ಚಂದ್ ಅವರ ಬದ್ಧತೆ ಮತ್ತು ಸಾಧನೆ ಅದ್ವಿತೀಯವಾದುದು. ಕ್ರೀಡಾಪಟುಗಳ ಅದ್ಬುತ ಸಾಹಸಗಳನ್ನು ಮತ್ತು ಸಮಾಜದ ಮೇಲೆ ಅವರ ಆಳವಾದ ಪ್ರಭಾವವನ್ನು ಪರಿಗಣಿಸಲು ಇದು ಪ್ರಮುಖವಾದ ದಿನವಾಗಿದೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ ಕ್ರೀಡೆ ಸಾಮಾಜಿಕ ಬಂಧಗಳನ್ನು ಬಲಪಡಿಸುವುದರೊಂದಿಗೆ ಸಮುದಾಯಗಳ ಒಳಗೊಳ್ಳುವಿಕೆಗೆ ಮತ್ತು ಶಾಂತಿಯನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ ಎಂದರು. ಪ್ರಾಧ್ಯಾಪಕರಾದ ಡಾ.ಶೋಭಾರಾಣಿ,ಡಾ.ಮನೋಹರ್,ಡಾ.ದಸ್ತಗೀರಸಾಬ್ ದಿನ್ನಿ, ಡಾ. ನರಸಿಂಹಲು ಕುಂಚಂ,
ಡಾ .ಶ್ರೀನಿವಾಸ ರೆಡ್ಡಿ , ಪಂಪನಗೌಡ , ಕೆ. ಬಸಪ್ಪ, ವಿಷ್ಣು ಹಡಪದ, ಜಯರಾಂ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.