ಸರ್ಕಾರಿ ಪಾಲಿಟೆಕ್ನಿಕ್ ಪ್ರವೇಶದ ಅವಧಿ ವಿಸ್ತರಣೆ
ರಾಯಚೂರು,ಆ೩೦: ಜಿಲ್ಲೆಯ ಸರ್ಕಾರಿ ಹಾಗೂಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿನ ೨೦೨೪-೨೫ ನೇ ಸಾಲಿನಲ್ಲಿ ಪ್ರಥಮಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಪ್ರಥಮ ಸೆಮಿಸ್ಟರ್/ಲ್ಯಾಟರಲ್‌ಎಂಟ್ರಿ ೩ನೇ ಸೆಮಿಸ್ಟರ್ ಡಿಪ್ಲೋಮಾಗೆ ಪ್ರವೇಶಕ್ಕೆ ಅರ್ಜಿಆಹ್ವಾನಿಸಲಾಗಿದ್ದು, ಅರ್ಜಿಯ ಅವಧಿಯನ್ನು ಸೆ.೦೬ರವರೆಗೆವಿಸ್ತರಿಸಲಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಪ್ರಾಂಶುಪಾಲರು ತಿಳಿಸಿದ್ದಾರೆ.
ಆಸಕ್ತರು ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರುವಹಾಗೂ ಐ.ಟಿ.ಐ ಮತ್ತು ಪಿ.ಯು.ಸಿ ವಿಜ್ಞಾನ ಪಾಸಾಗಿರುವ ಅರ್ಹಅಭ್ಯರ್ಥಿಗಳಿಗೆ ಪ್ರಥಮ ಸೆಮಿಸ್ಟರ್ ಅಥವಾ ಲ್ಯಾಟರಲ್ ಎಂಟ್ರಿ, ೩ನೇಸೆಮಿಸ್ಟರ್ ಡಿಪ್ಲೋಮಾಗೆ ಆನ್‌ಲೈನ್ ಆಧಾರಿತ ಕೋರ್ಸುಗಳಲ್ಲಿನಭರ್ತಿ ಆಗದ ಖಾಲಿ ಉಳಿದಿರುವ ಸೀಟುಗಳನ್ನು ಆಫ್- ಲೈನ್ ಮೂಲಕಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳು ಸಂಸ್ಥೆಯ ಪ್ರಾಚಾರ್ಯರಿಗೆಅರ್ಜಿಯನ್ನು ಸಲ್ಲಿಸಿ, ಪ್ರವೇಶ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.