ವಿದ್ಯುತ್ ಸ್ಪರ್ಶ, ಯುವಕ ಸಾವು..
ಮಾನ್ವಿ.ಆ೩೦:ತಾಯಮ್ಮ ದೇವಿ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಕೈಗೊಂಡಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಯುವಕ ಮೃತಪಟ್ಟಿದ್ದಾನೆ.
ಘಟನೆ ಸಂಗಾಪುರ ಗ್ರಾಮದಲ್ಲಿ ನಡೆದಿದ್ದು. ಜಿಲ್ಲೆಯ ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿದ್ಯುತ್ ದೀಪಾಲಂಕಾರ ವೇಳೆ ಶಾಕ್ ಹೊಡೆದು ಕನಕ (೨೮) ಮೃತಪಟ್ಟ ದುರ್ದೈವಿ. ಸಂಗಾಪುರ ಗ್ರಾಮದ ಅಧಿದೇವತೆ ತಾಯಮ್ಮ ದೇವಿ ದೇವಾಲಯದಲ್ಲಿ ಶ್ರಾವಣ ಮಾಸದ ಕಡೆ ಶುಕ್ರವಾರ ಅಂಗವಾಗಿ ವಿಶೇಷ ಪೂಜೆ ಆಯೋಜನೆ ಮಾಡಲಾಗಿತ್ತು.
ವಿಶೇಷ ಪೂಜೆ ಹಿನ್ನೆಲೆ ದೇವಸ್ಥಾನಕ್ಕೆ ದೀಪಾಲಂಕಾರ ವ್ಯವಸ್ಥೆ ಮಾಡುತ್ತಿದ್ದ ವೇಳೆ ಈ ವೇಳೆ ವಿದ್ಯುತ್ ಹರಿದು ಯುವಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಆಗಮಿಸಿದ ಮಾನ್ವಿ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ತಾಲೂಕು ಆಸ್ಪತ್ರೆಗೆ ಶವ ರವಾನೆ ಮಾಡಿದ್ದಾರೆ