ವಕ್ಫ್ ಸಲಹಾ ಸಮಿತಿ ಅಧ್ಯಕ್ಷರ ವಜಾಕ್ಕೆ ಒತ್ತಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಆ.೩೦:ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿ ಅಧ್ಯಕ್ಷ ಮೌಲಾನಾ ಫರೀದ್‌ಖಾನ್ ಅವರನ್ನು ವಜಾಗೊಳಿಸಬೇಕೆಂದು ವಕ್ಫ್ ಮಂಡಳಿ ಸಲಹಾ ಸಮಿತಿ ಒತ್ತಾಯಿಸಿದೆ.
ಈ ಸಂಬಂಧ ರಾಜ್ಯ ವಕ್ಖ್ ಮಂಡಳಿ ಅಧ್ಯಕ್ಷರಿಗೆ ಮನವಿ ಮಾಡಿರುವ ಸಮಿತಿ ಜಿಲ್ಲೆಯ ಸಲಹಾ ಸಮಿತಿ ಅಧ್ಯಕ್ಷ ಸೈಯದ್‌ಮುಕ್ತಾರ್ ಅಹಮದ್ ಅವರು ಸರ್ವೆ ನಂ. ೧೧೭೯/೧ ಸೈಯದ್ ಶಾ ಕರೀಂವುಲ್ಲ ಖಾದ್ರಿ ಮಸೀದಿ ಇದ್ದು, ಕಳೆದ ೨೫೦ ವರ್ಷಗಳ ಇತಿಹಾಸ ಹೊಂದಿದೆ.
ಈ ಮಸೀದಿ ಮತ್ತು ದರ್ಗಾಕ್ಕೆ ೧೮ ಎಕರೆ ಜಮೀನು ಇದ್ದು, ಸದರಿ ಜಮೀನನ್ನು ನಿವೇಶವನ್ನಾಗಿ ಪರಿವರ್ತಿಸಿ ಲೇ ಔಟ್ ಮಾಡಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾ ವಕ್ಫ್‌ಮಂಡಳಿ ಅಧ್ಯಕ್ಷ ಸೈಯದ್ ಮುಕ್ತಾರ್ ಅಹಮದ್ ಅವರನ್ನು ವಜಾಗೊಳಿಸಿ ನಂತರ ಮೌಲಾನಾ ಫರೀದ್‌ಖಾನ್ ಅವರನ್ನು ನೇಮಕ ಮಾಡಲಾಗಿತ್ತು ಎಂದು ಮುಸ್ಲಿಂ ಸಮಾಜ ಮುಖಂಡರು ತಿಳಿಸಿದ್ದಾರೆ.
ದರ್ಗಾದ ಜಮೀನಿನಲ್ಲಿ ನಿವೇಶನಗಳ ಮತ್ತು ಲೇಔಟ್ ಕಾಮಗಾರಿ ಪೂರ್ಣಗೊಂಡಿರುವುದಕ್ಕೆ ಅಧ್ಯಕ್ಷರ ನಿರ್ಲಕ್ಷ್ಯವೇ ಕಾರಣ.ಕಳೆದ ೬ ತಿಂಗಳಿನಿಂದಲೂ ದರ್ಗಾ ಆಸ್ತಿ ಕಾಪಾಡುವಲ್ಲಿ ಕ್ರಮ ವಹಿಸದ ವಕ್ಫ್‌ಮಂಡಳಿ ಅಧ್ಯಕ್ಷರನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಲಾಗಿದೆ.
೨೦೨೪ರ ಮಾರ್ಚ್ ರಂದು ವಕ್ಫ್ ಮಂಡಳಿ ಸಾಮಾನ್ಯ ಸಭೆ ಕುರಿತು ಅಧ್ಯಕ್ಷ ಮೌಲಾನಾ ಫರೀದ್ ಖಾನ್ ವಾಟ್ಸಾಪ್ ಮೂಲಕ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಕಾನೂನು ಬದ್ಧವಾಗಿ ನೋಟಿಸ್ ನೀಡಿಲ್ಲ.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿರುವ ವಕ್ಫ್‌ಮಂಡಳಿಗೆ ಮಾಹಿತಿ ನೀಡದೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಇಂತಹ ಅಧ್ಯಕ್ಷರಿಂದ ವಕ್ಫ್ ಮಂಡಳಿ ಆಸ್ತಿ ಸಂರಕ್ಷಣೆ ಅಸಾಧ್ಯ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಮೌಲಾನಾ ಫರೀದ್ ಖಾನ್ ಅವರನ್ನು ವಜಾಗೊಳಿಸಿ ನೂತನ ಅಧ್ಯಕ್ಷರನ್ನು ನೇಮಕ ಮಾಡಬೇಕೆಂದು ವಕ್ಫ್ ಮಂಡಳಿಯ ಉಪಾಧ್ಯಕ್ಷರು, ಸದಸ್ಯರು ಮನವಿ ಮಾಡಿದ್ದಾರೆ.