ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಿ
ರಾಯಚೂರು,ಆ೩೦:ನಗರದ ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಪಿಬಿಎಸ್‌ಕೆ. ಸಿಬಿಎಸ್ ಈ. ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಗಸ್ಟ್ ೨೯ರಂದು ಆಚರಣೆ ಮಾಡಲಾಯಿತು,ಮೇಜರ್ ಧ್ಯಾನ್ ಚಂದ್ ರವರ ಜನ್ಮ ದಿನದ ನಿಮಿತ್ಯ ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಯಿತು.ಶಾಲೆಯ ಪ್ರಾಂಶುಪಾಲರಾದ ಆಯಿಶಾ ಸುಲ್ತಾನ್ ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಮೇಜರ್ ಧ್ಯಾನ್ ಚಂದರವರು ಒಬ್ಬ ಭಾರತೀಯ ಫೀಲ್ಡ್ ಹಾಕಿ ಆಟಗಾರರಾಗಿದ್ದರು.
ಇವರನ್ನುಅನೇಕರು ಇತಿಹಾಸದಲ್ಲಿ ಶ್ರೇಷ್ಠ ಫೀಲ್ಡ್ ಹಾಕಿ ಆಟಗಾರ ಎಂದು ಪರಿಗಣಿಸಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಅರ್ಷಿಯಾ ಅವರು ನಿರ್ವಹಿಸಿದ್ದರು ಹಾಗೂ ೧೦ನೆಯ ತರಗತಿ ವಿದ್ಯಾರ್ಥಿ ವೆಂಕಟೇಶ್ ಕುಲಕರ್ಣಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಮಾತಾಡಿದರು ಹಾಗೂ ೧೦ನೇ ಆಶೀಶ್ ತರಗತಿ ವಿದ್ಯಾರ್ಥಿಧ್ಯಾನ್ ಚಂದ ರವರ ಸಾಧನೆ ಬಗ್ಗೆ ಮಾತಾಡಿದರು.
ದೈಹಿಕ ನಿರ್ದೇಶಕರು ಬಿ.ಎಸ್. ರೆಡ್ಡಿ,ಹಾಗೂ ಎಲ್ಲಾ ಮಕ್ಕಳು ಮತ್ತುಶಿಕ್ಷಕ ವೃಂದದವರು ಪಾಲ್ಗೊಂಡಿದರು. ,