ಆಯವ್ಯಯ ೨೦೨೪-೨೫ ವಿಕಸಿತ ಭಾರತಕ್ಕೆ ಅಡಿಗಲ್ಲು
ರಾಯಚೂರು,ಆ೩೦: ಗುಣಮಟ್ಟ ಶಿಕ್ಷಣ ಹಾಗೂ ಕೌಶಲ್ಯ ವಿದ್ಯಾರ್ಥಿಗಳಿಗೆ ನೀಡಬೇಕು ಅರ್ಹತೆಗೆ ತಕ್ಕಹಾಗೆ ಉದ್ಯೋಗ ಸಿಗಬೇಕು ಎಲ್ಲಾರಿಗೂ ಒಳಗೊಳ್ಳುವ ಮಾನವಅಭಿವೃದ್ಧಿಯಾಗಬೇಕು. ದೇಶದ ಅಭಿವೃದಿಗೆ ರಾಜ್ಯ ಸರ್ಕಾರ ಮತ್ತುಕೈಗಾರಿಕೆಗಳ ಸಹಭಾಗಿತ್ವ ಅತಿಮುಖ್ಯ ಎಂದು ಬೆಂಗಳೂರು ವಿವಿ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ.ಎಸ್.ಆರ್.ಕೇಶವ ಹೇಳಿದರು.
ರಾಯಚೂರು ವಿವಿ ಅರ್ಥಶಾಸ್ತ್ರ ಅಧ್ಯಯನ ವಿಭಾಗದವತಿಯಿಂದ ಕೇಂದ್ರ ಆಯ-ವ್ಯಯ (ಬಜೆಟ್) ೨೦೨೪-೨೫ ರ ವಿಶ್ಲೇಷಣೆ ಕುರಿತ ವಿಶೇಷಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ದೇಶದಲ್ಲಿ ಕೇವಲ ಶೇಕಡಾ ೧೧.೪ ರಷ್ಟು ಉತ್ಪಾದಕತೆ ಹೆಚ್ಚಾಗಬೇಕು. ಅತಿ ಹೆಚ್ಚು ಮಹಿಳೆಯರು ಉದ್ಯೋಗದಲ್ಲಿ ತೊಡಗಬೇಕು.ಭಾರತದ ಆರ್ಥಿಕತೆ ಶೇಕಡಾ ೮.೨ ಬೆಳವಣಿಗೆ ಆಗಿದ್ದು, ತಲಾ ಆದಾಯ ೨.೧೨ ಲಕ್ಷ ಇದೆ. ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಾಲಿನಲ್ಲಿ ಭಾರತಕ್ಕೆ ಸ್ಥಾನ ಸಿಗಬೇಕೆಂದರೆ ತಲಾ ಆದಾಯ ೧೪.೯ ಸಾವಿರ ಡಾಲರ್‌ಗೆ ಏರಿಕೆಯಾಗಬೇಕು ಆದರೆ ಪ್ರಸ್ತುತ ತಲಾ ಆದಾಯ ೨.೫ ಸಾವಿರ ಡಾಲರ್ ಇದೆ. ಆಯ-ವ್ಯಯ ಮಾಡುವುದಾದರೆ ಅಂತರಾಷ್ಟ್ರೀಯಮಟ್ಟದಲ್ಲಿ ಆಗುವ ಬದಲಾವಣೆ ಕುರಿತು ವಿಶ್ಲೇಷಣೆ ಮಾಡುವುದು ಉತ್ತಮ.ಶೇಕಡಾ ೪೫ ರಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ೫೬.೫ ಕೋಟಿ ಜನವರ್ಕ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ೭೮.೫ ಲಕ್ಷ ಕೃಷಿಯೇತರಹುದ್ದೆಗಳನ್ನು ಸೃಷ್ಟಿ ಮಾಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚೂರು ವಿವಿ ಕುಲಸಚಿವ ಪ್ರೊ.ವಿಶ್ವನಾಥ.ಎಂ ಬಜೆಟ್ ವಿಶ್ಲೇಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ, ಹಾಗೂ ಸಾಮಾಜ ವಿಜ್ಞಾನಗಳಲ್ಲಿಯೇ ಅರ್ಥಶಾಸ್ತ್ರ ಒಂದು ಉತ್ಕೃಷ್ಟ ವಿಷಯವಾಗಿದ್ದು ವಿದ್ಯಾರ್ಥಿಗಳೆಲ್ಲರೂ ಆರ್ಥಿಕ ವಿಷಯಗಳನ್ನು ಸಂಗತಿಗಳನ್ನು ಅರಿಯಲು ಪ್ರಯತ್ನಿಸಬೇಕು. ದೇಶದ ಅಭಿವೃದ್ಧಿಗೆವಿದ್ಯಾರ್ಥಿಗಳ ಪಾತ್ರ ಅಪಾರ ಎಂದರು. ನುಡಿದರು.
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ,ಕಲಾನಿಕಾಯದ ಡೀನ್ ಪ್ರೊ.ಪಿ.ಭಾಸ್ಕರ್, ವಿಜ್ಞಾನ ನಿಕಾಯದ ಡೀನ್ ಪ್ರೊ.ಪಾರ್ವತಿ ಸಿ.ಎಸ್.ವೇದಿಕೆ ಮೇಲೆ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕ ಡಾ.ನಾಗರಾಜ.ಕೆಸ್ವಾಗತಿಸಿದರು, ವಿದ್ಯಾರ್ಥಿನಿ ಸವಿತಾ ಪ್ರಾರ್ಥಿಸಿದರು, ಅತಿಥಿ ಉಪನ್ಯಾಸಕರಾದ ದುರುಗಪ್ಪಗಣೇಕಲ್ ನಿರೂಪಿಸಿದರು, ಡಾ.ಶಂಕರಾನಂದ.ಜಿ ಸಂಪನ್ಮೂಲ ವ್ಯಕ್ತಿ ಪರಿಚಯಿಸಿದರುಮತ್ತು ರಾಮಚಂದ್ರಪ್ಪ ವಂದಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಶಿವರಾಜ, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಇದ್ದರು.