ನಾಮಫಲಕಗಳಲ್ಲಿ ೬೦% ಕನ್ನಡ ಕಡ್ಡಾಯ
ರಾಯಚೂರು,ಆ೩೦: ರಾಯಚೂರುನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಅಥವಾಉದ್ಯಮೆದಾರರು ತಾವು ನಡೆಸುತ್ತಿರುವ ವಾಣಿಜ್ಯ ಅಥವಾಉದ್ಯಮೆಗಳ ನಾಮಫಲಕಗಳನ್ನು ಶೇ ೬೦%ರಷ್ಟು
ಕಡ್ಡಾಯವಾಗಿ ಕನ್ನಡದಲ್ಲಿಯೇ ಇರುವಂತೆಅಳವಡಿಸಬೇಕೆಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಒಂದುವೇಳೆ ಶೇ.೬೦% ರಷ್ಟು ಕನ್ನಡದಲ್ಲಿ ಇಲ್ಲದಿದ್ದಲ್ಲಿ,ಈಗಾಗಲೇ ನಗರಸಭೆಯ ಕಂದಾಯ ನಿರೀಕ್ಷಕರು ಹಾಗೂಕರವಸೂಲಿಗಾರರು ಅಥವಾ ಆರೋಗ್ಯ ನಿರೀಕ್ಷಕರು ಆಸ್ತಿ ತೆರಿಗೆ ಟ್ರೇಡ್ ಲೈಸೆನ್ಸ್ (ಸನದ್ದು) ವಸೂಲಿ ಮಾಡುತ್ತಿರುವ ತಂಡವುಪರಿಶೀಲಿಸಿ ತಾವು ಅಳವಡಿಸಿದ ಕನ್ನಡೇತರ (ಇತರೆ ಭಾಗಗಳ)ನಾಮಫಲಕಗಳನ್ನು ತೆರವುಗೊಳಿಸಿ ಇದಕ್ಕೆ ಸಂಬಂಧಿಸಿದದಂಡವನ್ನು ವಿಧಿಸಿ ಮತ್ತು ಇದಕ್ಕೆ ಸಂಬಂಧಿಸಿದ ದಂಡದಮೊತ್ತವನ್ನು ತಮ್ಮಿಂದ ವಸೂಲಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆನಾಮಫಲಕಗಳಲ್ಲಿ ೬೦% ಕನ್ನಡ ಕಡ್ಡಾಯ