ದರ್ಶನ್ ಅಭಿಮಾನಿಯಾಗಿದ್ದ ಕುಖ್ಯಾತ ಕಳ್ಳಿ ಸೆರೆ
ಬೆಂಗಳೂರು,ಆ.೩೦-ಹೆಚ್ಚಿನ ಜನಸಂದಣಿಯ ಜಾತ್ರೆ, ಸಂತೆ ಹಾಗೂ ಬಸ್‌ಗಳಲ್ಲಿ ಹೊಂಚು ಹಾಕಿ ಮಹಿಳೆಯರ ಚಿನ್ನಾಭರಣಗಳನ್ನು ದೋಚುತ್ತಿದ್ದ ನಟ ದರ್ಶನ್ ಕಟ್ಟಾ ಅಭಿಯಾನಿಯಾಗಿದ್ದ ಕುಖ್ಯಾತ ಕಳ್ಳಿಯನ್ನು ಬಂಧಿಸಿರುವ ಕೆಆರ್ ಪುರಂ ಪೊಲೀಸರು ೪೦ ಲಕ್ಷ ಮೌಲ್ಯದ ೫೩೬ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯ ಶಾರದ(೩೨) ಬಂಧಿತ ಆರೋಪಿಗಳಾಗಿದ್ದು, ಹಿಂದೆ ಪತ್ನಿ ಮೇಲೆ ಹಲ್ಲೆ ಸಂಬಂಧ ನಟ ದರ್ಶನ್ ಬಂಧಿತನಾಗಿದ್ದ ವೇಳೆ ಈಕೆ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದಳು.
ವರ್ಷಗಳ ಬಳಿಕ ಮತ್ತೆ ಕೆಆರ್ ಪುರಂ ನಲ್ಲಿ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋಗಿದ್ದ ಮಹಿಳೆಯೊಬ್ಬರ ೬ ಸಾವಿರ ಹಣವಿದ್ದ ಪರ್ಸ್ ಕದ್ದು ಸಿಕ್ಕಿಬಿದ್ದಿದ್ದಾಳೆ, ವಿಚಾರಣೆಯಲ್ಲಿ ನಟ ದರ್ಶನ್ ಕಟ್ಟಾ ಅಭಿಯಾನಿಯಾಗಿರುವುದನ್ನು ತಿಳಿಸಿ ಆತ ಜೈಲಿನಲ್ಲಿರುವಾಗಲೇ ಸೆರೆಯಾಗಿದ್ದೇನೆ ಎಂದಿದ್ದಾಳೆ.
ಬಂಧಿತಳಿಂದ ೪೦ ಲಕ್ಷ ಮೌಲ್ಯದ ೫೩೬ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.
ಕೆಆರ್ ಪುರಂನ ೬ ಸಾವಿರ ಹಣವಿದ್ದ ಪರ್ಸ್ ಕದ್ದು ಕೇವಲ ೨೪ ಗಂಟೆಯೊಳಗೆ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ ಶಾರದ ವಿಚಾರಣೆಯಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಅರಸೀಕೆರೆಯ ಜ್ಯೂವೆಲರಿ ಶಾಪ್ ಗಳಲ್ಲಿ, ಹರ್ಬನ್ ಕೋ ಅಪರೇಟಿವ್ ಬ್ಯಾಂಕ್ ಹಾಗೂ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ೩೯ ಗಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತೆಯ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣೆಗಳ ೭ ಕಳವು ಪ್ರಕರಣಗಳು ಪತ್ತೆಯಾಗಿವೆ,ಅದರಲ್ಲಿ ಕೆ.ಆರ್.ಪುರಂ ೪, ಅನ್ನಪೂರ್ಣೇಶ್ವರಿ, ಬಾಗಲುಗುಂಟೆ, ಮಹದೇವಪುರ ಠಾಣೆಯ ತಲಾ ೧ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಯನ್ನು ವೈಟ್ ಫೀಲ್ಡ್ ಡಿಸಿಪಿ ಡಾ:ಶಿವಕುಮಾರ್ ಗುಣಾರೇ ಮಾರ್ಗದರ್ಶನದಲ್ಲಿ ಕೆ ಆರ್ ಪುರಂ ಇನ್ಸ್‌ಪೆಕ್ಟರ್ ರಾಮಮೂರ್ತಿ.ಬಿ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.