ಹಾನಿಯಾಗದಂತೆ ಗೌರಿ ಗಣೇಶ ಚತುರ್ಥಿ ಆಚರಣೆಗೆ ಡಿಸಿ ಸೂಚನೆ
ರಾಯಚೂರು,ಆ೩೦:ಜಿಲ್ಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಗೌರಿ ಗಣೇಶ ಚತುರ್ಥಿ ಹಬ್ಬದಸಮಯದಲ್ಲಿ ಗಣೇಶ ವಿಗ್ರಹಗಳನ್ನು ತಯಾರು,ಸಂಗ್ರಹ, ಮಾರಾಟ ಮತ್ತು ವಿಸರ್ಜನೆಯಿಂದ ಪರಿಸರಕ್ಕೆ
ಹಾನಿಯಾಗುವಂತಹ ವಸ್ತುಗಳು ಮತ್ತು ಲೋಹ ಮಿಶ್ರಿತಬಣ್ಣಗಳನ್ನು ಉಪಯೋಗಿಸುವುದರಿಂದ, ನೈಸರ್ಗಿಕಜಲಮೂಲಗಳು ಕಲುಷಿತಗೊಳ್ಳುತ್ತದೆ. ಹೀಗಾಗಿ ನೈಸರ್ಗಿಕಬಣ್ಣಗಳಿಂದ ತಯಾರಿಸಿರುವ ಮಣ್ಣಿನ ಚಿಕ್ಕ ಮೂರ್ತಿಗಳನ್ನುಖರೀದಿಸುವ ಮೂಲಕ ಗೌರಿ ಗಣೇಶ ಚತುರ್ಥಿ ಹಬ್ಬವನ್ನು ಆಚರಣೆಮಾಡಬೇಕೆಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ತಿಳಿಸಿದ್ದಾರೆ.
ಪರಿಸರ ಸ್ನೇಹಿಗಣೇಶ ಚತುರ್ಥಿ ಆಚರಣೆ ಕುರಿತು ಸುತ್ತೋಲೆಯನ್ನುಹೊರಡಿಸಿರುತ್ತದೆ. ನಗರ ಸ್ಥಳೀಯ ಸಂಸ್ಥೆಗಳಪೌರಾಯುಕ್ತರು ಅಥವಾ ಮುಖ್ಯಾಧಿಕಾರಿಗಳಿಗೆ ಹಾಗೂ ಮುಖ್ಯರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಇವರೊಂದಿಗೆಸಭೆ ನಡೆಸುವ ಮೂಲಕ ನಗರ ಮತ್ತು ಗ್ರಾಮೀಣಪ್ರದೇಶಗಳ ವ್ಯಾಪ್ತಿಯಲ್ಲಿಯೂ ಈ ಬಾರಿಯ ಗೌರಿ-ಗಣೇಶಹಬ್ಬದ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶಚತುರ್ಥಿ ಆಚರಣೆ ಕುರಿತು ಈ ಕೆಳಗಿನಂತೆ ಆದೇಶಿಸಿರುತ್ತಾರೆ.ಸಾರ್ವಜನಿಕರು ಸಾಧ್ಯವಾದಷ್ಟು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿ.ಓ.ಪಿ),ಲೋಹ ಮಿಶ್ರಿತ ಬಣ್ಣ ಲೇಪಿತದಂತಹ ಮೂರ್ತಿಗಳ ಬದಲಿಗೆ ನೈಸರ್ಗಿಕ ಬಣ್ಣಗಳಿಂದ ತಯಾರಿಸಿರುವ ಮಣ್ಣಿನ ಚಿಕ್ಕಮೂರ್ತಿಗಳನ್ನು ಖರೀದಿಸಲು ನಿರ್ದೇಶಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪನೆಗೆ ಸಂಬಂಧಪಟ್ಟ ಗಣೇಶಮಂಡಳಿಯವರು ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್‌ಇಲಾಖೆಯಿಂದ ಅಗತ್ಯ ಪರವಾನಿಗೆ ಪಡೆಯುವ ಮೂಲಕಷರತ್ತು ಮತ್ತು ನಿಬಂಧನೆಗಳನ್ನು ಪಾಲನೆ ಮಾಡಲುನಿರ್ದೇಶಿಸಿದೆ. ಹೊರ ರಾಜ್ಯದಿಂದ ತರುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ,ಲೋಹ ಮಿಶ್ರಿತ ಬಣ್ಣ ಲೇಪಿತದಂತಹ ವಿಗ್ರಹಗಳನ್ನುತಡೆಯಲು ಮತ್ತು ವಾಪಸ್ಸು ಕಳುಹಿಸುವ ಜವಾಬ್ದಾರಿಯನ್ನು ರಾಜ್ಯಗಡಿ ಭಾಗದ ಠಾಣೆ,ಚೆಕ್ ಪೋಸ್ಟನ ಅಧಿಕಾರಿಗಳಜವಾಬ್ದಾರಿಯಾಗಿರುತ್ತದೆ. ಈ ಸಂಬಂಧ ಜಿಲ್ಲೆಯ ವಾಣಿಜ್ಯ ತೆರಿಗೆ,ಸಾರಿಗೆಇಲಾಖೆ,ಪೊಲೀಸ್ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿರುತ್ತದೆ.
ಸ್ಥಳೀಯ ಸಂಸ್ಥೆಗಳು ಪ್ಲಾಸ್ಟರ್ ಆಫ್ ಪ್ಯಾರಿಸನಿಂದ ಲೋಹಮಿಶ್ರಿತ ಬಣ್ಣ ಲೇಪಿತ ವಿಗ್ರಹಗಳನ್ನು ತಯಾರಿಸುವ ಮತ್ತುಮಾರಾಟ ಮಾಡುವ ವ್ಯಕ್ತಿಗಳಿಗೆ/ ಸಂಸ್ಥೆಗಳಿಗೆ ವ್ಯಾಪಾರಲೈಸನ್ಸ್‌ನ್ನು ನೀಡದಿರಲು ಹಾಗೂ ಯಾವುದೇ ಲೈಸನ್ಸ್‌ನ್ನುಪಡೆಯದೆ ಅನಧೀಕೃತವಾಗಿ ತಯಾರಿ, ಮಾರಾಟ ಮಾಡುತ್ತಿರುವವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನುತಕ್ಷಣ ಜರುಗಿಸಲು ಸೂಚಿಸಲಾಗಿದೆ.ಪ್ಲಾಸ್ಟಿಕ್ ರಹಿತ ವಸ್ತುಗಳ ಬದಲಿಗೆ ಹೂವು ಪತ್ರೆಗಳಿಂದಅಲಂಕರಿಸಿ ಮೂರ್ತಿಯನ್ನು ಪೂಜಿಸುವುದು. ಗಣೇಶನವಿಗ್ರಹಗಳನ್ನು ಸ್ಥಳೀಯ ಸಂಸ್ಥೆಗಳು(ಮುನ್ಸಿಪಾಲಿಟಿಗಳು) ಗೊತ್ತುಪಡಿಸಿದ ಕೆರೆ, ಕೊಳಗಳಲ್ಲಿಮಾತ್ರ ವಿಸರ್ಜಿಸಿ. ಹೂ ಹಾಗೂ ಇನ್ನಿತರ ಪೂಜಾ ಸಾಮಾಗ್ರಿಗಳನ್ನುಕೆರೆ ಕೊಳದ ದಡದಲ್ಲಿ ಇಟ್ಟಿರುವ ಬುಟ್ಟಿಗಳಲ್ಲಿ ಅಥವಾನಿಗಧಿತ ಜಾಗದಲ್ಲಿ ಹಾಕಿ. ಮನೆಗಳಲ್ಲಿ ಸ್ಥಾಪಿಸಲ್ಪಟ್ಟವಿಗ್ರಹಗಳನ್ನು ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸುವ
ಪದ್ಧತಿಯನ್ನು ರೂಢಿ ಮಾಡಿಕೊಳ್ಳಿ.ಮೂರ್ತಿಗಳ ವಿಸರ್ಜನೆಯಾದ ೨೪ಗಂಟೆಗಳ ಒಳಗೆ (ಕೆರೆ, ಬಾವಿ,ಹೊಂಡಗಳು, ನದಿಗಳ ಹತ್ತಿರ) ಬಿಟ್ಟು ಹೋದ ಸಾಮಗ್ರಿಗಳನ್ನು ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿ ಕಸವಿಲೇವಾರಿ ಜಾಗಗಳಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.ಧ್ವನಿವರ್ಧಕ ಮತ್ತು ಪಟಾಕಿಗಳನ್ನು ಉಪಯೋಗಿಸಿ ಶಬ್ಧಮತ್ತು ವಾಯು ಮಾಲಿನ್ಯ ಮಾಡಬೇಡಿ ರಾತ್ರಿ ಸಮಯ೧೦ಗಂಟೆಯಿಂದ ಬೆಳಿಗ್ಗೆ ೦೬ಗಂಟೆಯವರೆಗೆಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.