ಅಕ್ರಮ ಮರಳು ಸಾಗಾಣಿಕೆ ಟಿಪ್ಪರ್ ವಶ : ಪ್ರಕರಣ ದಾಖಲು
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೩೦ ನಗರದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಿದ್ದ ಟಿಪ್ಪರ್ ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ರಾಜಧನ ಪಾವತಿಸದೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಟಿಪ್ಪರ್ ಮೌಖಿಕ ದೂರು ಆಧರಿಸಿ ಠಾಣೆಗೆ ತಂದು ದೂರು ದಾಖಲಿಸಲಾಗಿದೆ ಎಂದರು.
ಟಿಪ್ಪರ್ ಮಾಲಿಕ ಸಚಿನ್ ತುರವಿಹಾಳ ಚಾಲಕ ರವಿ.ಟಿಪ್ಪರ್ ಗೆ ನಂಬರ್ ಪ್ಲೇಟ್ ಇಲ್ಲದ ಕಾರಣ ಇಂಜಿನ್ ಮತ್ತು ಚೆಸ್ಸಿ ನಂಬರ್ ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.